DAKSHINA KANNADA
ಪುತ್ತೂರು – ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ – ಬೈಕ್ ಸವಾರ ಸಾವು

ಪುತ್ತೂರು ಎಪ್ರಿಲ್ 29: ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹೈಕ್ ಸವಾರ ಸಾವನಪ್ಪಿದ ಘಟನೆ ಮಾಡೂರು ಗ್ರಾಮದ ಕಾವು ಸಮೀಪದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೃತರನ್ನು ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮದ ಪಾತೂರು ಸಮೀಪದ ಬದಿಮೂಲೆ ನಿವಾಸಿ ಮೋಯ್ದಿನ್‌ಕುಂಞ ಅವರ ಪುತ್ರ ಅಶ್ರಫ್ (25) ಎಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯ ನಾಪೊಕ್ಲುವಿನಲ್ಲಿ ಎಲೆಕ್ಟಿಕಲ್ ಅಂಗಡಿ ಹೊಂದಿರುವ ಅಶ್ರಫ್ ಅವರು ಸೋಮವಾರ ಮನೆಗೆ ಬಂದಿದ್ದರು. ಮಂಗಳವಾರ ನಾಪೊಕ್ಲುವಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ. ಅಶ್ರಫ್ ಅವರು ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಕೊಟ್ಯಾಡಿಯಿಂದ ಪುತ್ತೂರು ಕಡೆ ಹೋಗುತ್ತಿದ್ದ ಬಸ್ ವಾಹನವೊಂದನ್ನು ಹಿಂದಿಕ್ಕುವವಾಗ ಬೈಕ್‌ಗೆ ಡಿಕ್ಕಿಯಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
