DAKSHINA KANNADA
ಪುತ್ತೂರು – ಹನಿಟ್ರ್ಯಾಪ್ ಪ್ರಕರಣ ಮೂವರು ಆರೋಪಿಗಳ ಅರೆಸ್ಟ್

ಪುತ್ತೂರು ಜುಲೈ 6: ಪುತ್ತೂರಿನ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ನಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ನಿವಾಸಿ ಶಾಫಿ (34), ಸವಣೂರು ಗ್ರಾಮದ ಅತ್ತಿಕೆರೆ ನಿವಾಸಿ ಅಝರುದ್ದೀನ್(30) ಮತ್ತು ಮಾಂತೂರು ನಿವಾಸಿ ನಝೀರ್ (38) ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಸೋಮವಾರ ಸವಣೂರು ಸಮೀಪದ ಸರ್ವೇ ಬಳಿ 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಹನಿಟ್ರ್ಯಾಪ್ ನ ಯುವತಿ ಬಂಟ್ವಾಳ ನಿವಾಸಿ ತನಿಷಾ ರಾಜ್ ಳನ್ನು ಶುಕ್ರವಾರವೇ ಬಂಧಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಬಂಧಿತರಿಂದ 7.05 ಲಕ್ಷ ರೂ. ನಗದು, ಕಾರು, ಅಟೋರಿಕ್ಷಾ ಮತ್ತು 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ನೆಟ್ಟಣಿಗೆ ಮುಡ್ನೂರಿನ ಅಬ್ದುಲ್ ನಾಸಿರ್ ಅವರಿಗೆ ಕೆಲವು ದಿನಗಳ ಹಿಂದೆ ಕಾರ್ಕಳದವಳೆಂದು ಪರಿಚಯಿಸಿಕೊಂಡಿದ್ದ ಯುವತಿಯ ಪರಿಚಯವಾಗಿದೆ. ಮುಂದೆ ಆತನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಭಾಷಣೆ ನಡೆಸಿದ್ದಾಳೆ. ಒಂದು ದಿನ ಆಕೆ ಆತನನ್ನು ಮಂಗಳೂರಿಗೆ ಬರಲು ಹೇಳಿದ್ದಾಳೆ.
ಹೀಗೆ ಇವರಿಬ್ಬರ ನಡುವೆ ಸ್ನೇಹ ಬೆಳೆದಿದೆ. ಬಳಿಕ ಆಕೆಯೊಂದಿಗಿರುವ ಅಶ್ಲೀಲ ಚಿತ್ರಗಳನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿ ಆತನಿಂದ 30 ಲಕ್ಷ ರೂ. ಬೇಡಿಕೆ ಇಟ್ಟಿದ್ದಾಳೆ. ಇದರಿಂದ ಭಯಭೀತನಾದ ಅತ ಮೊದಲ ಕಂತಿನಲ್ಲಿ 15 ಲಕ್ಷ ರೂ.ವನ್ನು ಆಕೆಯ ಬ್ಯಾಂಕ್ ಖಾತೆಗೆ ಹಾಕಿದ್ದಾನೆ. ಉಳಿದ ಹಣ ಕೊಡು ಎಂದು ಮೇಲಿಂದ ಮೇಲೆ ಬೆದರಿಕೆ ಕರೆಗಳು ಆಕೆಯಿಂದ ಬರುತ್ತಿತ್ತು. ಇದರಿಂದ ಮರ್ಯಾದೆಗೆ ಅಂಜಿ ಒತ್ತಡಕ್ಕೊಳಗಾಗಿ ಮತ್ತೆ ಜಾಗ ಖರೀದಿಸಲು ಇಟ್ಟಿದ್ದ 15 ಲಕ್ಷವನ್ನು ನೀಡಿದ್ದಾನೆ.