DAKSHINA KANNADA
ಪುತ್ತೂರು ಸರಕಾರಿ ಆಸ್ಪತ್ರೆಗೆ ಪುತ್ತೂರು ತಾಲೂಕು ಹೆಚ್ಚುವರಿ ನಗರಾಭಿವೃದ್ಧಿ ಅಧಿಕಾರಿ ಭೇಟಿ ಪರಿಶೀಲನೆ
ಪುತ್ತೂರು ಫೆಬ್ರವರಿ 02: ಪುತ್ತೂರು ಸರಕಾರಿ ಆಸ್ಪತ್ರೆಗೆ ಪುತ್ತೂರು ತಾಲೂಕು ಹೆಚ್ಚುವರಿ ನಗರಾಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರು ತಾಲೂಕು ಹೆಚ್ಚುವರಿ ನಗರಾಭಿವೃದ್ಧಿ ಅಧಿಕಾರಿ ಹೆಚ್. ಕೃಷ್ಣಮೂರ್ತಿ ಅವರು ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕ, ಡಯಾಲಿಸೀಸ್ ಘಟಕ ಮತ್ತು ವಾರ್ಡ್ ಗಳನ್ನು ಪರಿಶೀಲನೆ ನಡೆಸಿದ್ದಾರೆ.
ತಾಲೂಕು ಆಸ್ಪತ್ರೆಗೆ ಬೇಕಾದ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದ ಕೃಷ್ಣಮೂರ್ತಿ , ಮುಂದಿನ ಭೇಟಿಯಲ್ಲಿ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು, ಅಲ್ಲದೆ ಸರಕಾರಿ ಆಸ್ಪತ್ರೆಗೆ ಬೇಕಾದ ವ್ಯವಸ್ಥೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಪ್ರಯತ್ನ ಮಾಡುವುದಾಗಿ ಈ ವೇಳೆ ತಿಳಿಸಿದರು.