DAKSHINA KANNADA
ಪುತ್ತೂರು – ನಟ ದರ್ಶನ್ ಜೊತೆ ಕೇರಳದ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಕೊಲೆ ಆರೋಪಿಯಿಂದ ಗ್ಯಾಂಗ್ ವಾರ್!

ಪುತ್ತೂರು ಮಾರ್ಚ್ 28: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಬೆಂಬಲಿಗರಾದ ಪ್ರಜ್ವಲ್ ರೈ ಮತ್ತು ದೀಕ್ಷಿತ್ ರೈ ನಡುವೆ ಗ್ಯಾಂಗ್ ನಡುವೆ ವಾರ್ ನಡೆದಿದೆ ಎನ್ನಲಾಗಿದ್ದು, ಈ ಗಲಾಟೆಯಲ್ಲಿ ಓರ್ವನಿಗೆ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಪುತ್ತೂರು ಪೇಟೆಯ ದರ್ಬೆ ಸಮೀಪದ ಹೋಟೆಲ್‌ನಲ್ಲಿ ಜಗಳ ಪ್ರಾರಂಭವಾಗಿದೆ. ಜಗಳದ ಮಾಹಿತಿ ಪಡೆದ ಪುತ್ತೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ತಂಡಗಳನ್ನು ಸಮದಾನಪಡಿಸಿ ಕಳುಹಿಸಿದ್ದಾರೆ. ಆದರೆ, ಇದಾದ ಕೆಲವೇ ಕ್ಷಣದಲ್ಲಿ ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಎರಡನೇ ಬಾರಿ ನಡೆದ ಗಲಟೆಯು ವಿಕೋಪಕ್ಕೆ ತಿರುಗಿದ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಇದೀಗ ಗಾಯಾಳುಗಳಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಪ್ರಜ್ವಲ್ ರೈ ಕಾಂಗ್ರೇಸ್ ಮುಖಂಡನೋರ್ವನ ಕೊಲೆ ಆರೋಪಿಯಾಗಿದ್ದು, ನಟ ದರ್ಶನ್ ಜೊತೆ ಕೇರಳದ ದೇವಸ್ಥಾನದಲ್ಲೂ ಗುರುತಿಸಿಕೊಂಡಿದ್ದ. ದೀಕ್ಷಿತ್ ರೈ ಕೂಡಾ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿರುವ ವ್ಯಕ್ತಿ, ಇಬ್ಬರೂ ಶಾಸಕ ಅಶೋಕ್ ಕುಮಾರ್ ರೈ ಜೊತೆ ಪ್ರತಿದಿನವೂ ಗುರುತಿಸಿಕೊಳ್ಳುವವರು, ಈ ಹಿಂದೆ ಇಬ್ಬರೂ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡವರು, ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆಯಾದಾಗ ಅವರ ಜೊತೆಗೆ ಇದ್ದಾರೆ.
1 Comment