DAKSHINA KANNADA
ಪುತ್ತೂರು – ಆಶೀರ್ವಾದ್ ಫರ್ನಿಚರ್ ಮಳಿಗೆಯಲ್ಲಿ ಬೆಂಕಿ ಅನಾಹುತ

ಪುತ್ತೂರು ಎಪ್ರಿಲ್ 14: ಪುತ್ತೂರು ನಗರದ ದರ್ಭೆಯಲ್ಲಿರುವ ಆಶೀರ್ವಾದ ಪರ್ನೀಚರ್ ಮಳಿಗೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಮಳಿಗೆಯಲ್ಲಿದ್ದ ಪೀಠೋಪಕರಣಗಳು ಹಾನಿಗೊಳಗಾಗಿವೆ.
ಬೆಳಿಗ್ಗೆ ಸಂದರ್ಭ ಮಳಿಗೆಯಿಂದ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಸ್ಥಳೀಯರು ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ.

ವರ್ಷದ ಹಿಂದೆ ಆಶೀರ್ವಾದ ಪರ್ನೀಚರ್ ಮಳಿಗೆಯ ಪಕ್ಕದಲ್ಲಿರುವ ಹರ್ಷಾ ಕಂಪೆನಿಯ ಗೋದಾಮಿನಲ್ಲೂ ಬೆಂಕಿ ಅನಾಹುತ ಸಂಭವಿಸಿತ್ತು. ಅದು ಕೂಡ ಏಫ್ರಿಲ್ ತಿಂಗಳಿನಲ್ಲಿಯೇ ಸಂಭವಿಸಿತ್ತು. ಎ 2ರ ನಸುಕಿನ ಜಾವ ಹರ್ಷಾದ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿದರೇ, ಸರಿಯಾಗಿ ಒಂದು ವರ್ಷ 12 ದಿನಗಳ ಬಳಿಕ ಪಕ್ಕದ ಫರ್ನಿಚರ್ ಅಂಗಡಿಗೆ ಬೆಂಕಿ ತಗುಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಅಚ್ಚರಿ ಉಂಟು ಮಾಡಿದೆ. ಬೆಂಕಿ ಅನಾಹುತದಿಂದಾದ ಹಾನಿಯ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ಏನೆಂಬುದು ತನಿಖೆಯ ನಂತರ ತಿಳಿದುಬರಬೇಕಿದೆ.