DAKSHINA KANNADA
ಪುತ್ತೂರು – ಕೃಷಿಕರ ಕೋವಿ ಡೆಪಾಸಿಟ್ ವಿಚಾರದಲ್ಲಿ ಜಿಲ್ಲಾಡಳಿತದಿಂದ ದಬ್ಬಾಳಿಕೆ
ಪುತ್ತೂರು ಎಪ್ರಿಲ್ 05: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೃಷಿಕರೆಲ್ಲಾ ಕೋವಿಯನ್ನು ಪೋಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಆದೇಶದ ವಿರುದ್ದ ಇದೀಗ ಕೃಷಿಕರು ತಿರುಗಿ ಬಿದ್ದಿದ್ದಾರೆ. ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಕೃಷಿ ಸಂಘಟನೆಗಳು
ಜಿಲ್ಲೆಯಲ್ಲಿ ಸುಮಾರು 624 ಮಂದಿ ಕೃಷಿಕರಲ್ಲಿದೆ ಕೋವಿ ಲೈಸೆನ್ಸ್ ಇದ್ದು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೃಷಿಕರೆಲ್ಲಾ ಕೋವಿಯನ್ನು ಪೋಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಕೋವಿ ಲೈಸೆನ್ಸ್ ಹೊಂದಿರುವ ಕೃಷಿಕರು ಕಾಡು ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿದ್ದು, ಕೋವಿ ಡೆಪಾಸಿಟ್ ಇಟ್ಟ ಸಮಯದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ 9 ಕೃಷಿಕರು ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಮೆಟ್ಟಿಲೇರಿರುವ ಕೃಷಿಕರಿಗೆ ಕೋವಿ ಠೇವಣಿ ಇಡುವುದರಿಂದ ವಿನಾಯತಿ ನೀಡಲಾಗಿದೆ. ಆದರೆ ವಿನಾಯತಿ ಕೋರಿ ಜಿಲ್ಲಾಧಿಕಾರಿಗಳಿಗೆ ಈ ಹಿಂದೆ ಅರ್ಜಿ ಸಲ್ಲಿಸಿರುವ ಇತರ ಕೃಷಿಕರಿಗೆ ಜಿಲ್ಲಾಡಳಿತ ಅನ್ಯಾಯ ಮಾಡುತ್ತಿದೆ ಎಂದು ಕೃಷಿಕರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಸ್ಕ್ರೀನಿಂಗ್ ಕಮಿಟಿ ಸಭೆ ಕರೆಯದೇ ಅರ್ಜಿ ತಿರಸ್ಕರಿಸಿದ್ದು, ಕೋವಿಗಳನ್ನು ಠೇವಣಿ ಇಡುವಂತೆ ಕೃಷಿಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
2009 ರ ಚುನಾವಣಾ ಆಯೋಗದ ಆದೇಶದಲ್ಲಿ ಕೃಷಿಕರು ಕೋವಿ ಠೇವಣಿ ಇಡುವ ಅವಶ್ಯಕತೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಆದರೂ ಜಿಲ್ಲಾಡಳಿತ ಕೃಷಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಕೃಷಿ ಸಂಘಟನೆಗಳು ಆರೋಪಿಸಿವೆ.