DAKSHINA KANNADA
ಡಿಕೆಶಿ ಪ್ರತಿಕೃತಿ ದಹನಕ್ಕೆ ಪೊಲೀಸರ ಅಡ್ಡಿ – ಪೋಲೀಸರ ವಿರುದ್ಧ ಮಾಜಿ ಶಾಸಕ ಸಂಜೀವ ಮಠಂದೂರು ಆಕ್ರೋಶ

ಪುತ್ತೂರು ಮಾರ್ಚ್ 25: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ವಿರೋಧಿ ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಶಾಸಕಿ ಭಾರತಿ ಶೆಟ್ಡಿ, ಅಲ್ಪಸಂಖ್ಯಾತ ತುಷ್ಟೀಕರಣಕ್ಲಾಗಿ ಸಂವಿಧಾನ ಬದಲಾಗಿಸುವ ಹಂತಕ್ಕೆ ಕಾಂಗ್ರೇಸ್ ತಲುಪಿದೆ. ನಿರಂತರವಾಗಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ, ಆದರೆ ಹಿಂದೂಗಳ ಮೇಲೆ ಅನ್ಯಾಯವಾದರೂ ಕಾಂಗ್ರೇಸ್ ನಲ್ಲಿರುವ ಹಿಂದುಗಳು ಮಾತನಾಡುವುದಿಲ್ಲ, ದೇವಸ್ಥಾನಕ್ಕೆ ತೆರಳಿ ಕೇಸರಿ ಸಾಲು ಹಾಕಿ ನಾನು ಹಿಂದು ಎನ್ನುತ್ತಾರೆ.

ನಾನು ದೇವಸ್ಥಾನದ ಹೆಂಚು ಬದಲಾಯಿಸಿದೆ ಎನ್ನುವ ಫೋಸ್ ಕೊಡುತ್ತಾರೆ, ಆದರೆ ಕಾಂಗ್ರೇಸ್ ಪಕ್ಷದಿಂದ ಹಿಂದುಗಳಿಗೆ ಅನ್ಯಾಯವಾಗುವಾಗ ಒಂದು ಶಬ್ದ ಮಾತನಾಡುವುದಿಲ್ಲ ಇದು ನಮ್ಮ ದೌರ್ಭಾಗ್ಯ ಎಂದು ಹೇಳಿದರು.
ಪ್ರತಿಭಟನೆ ಸಂದರ್ಭ ಡಿಕೆಶಿ ಪ್ರತಿಕೃತಿ ದಹನಕ್ಕೆ ಪೋಲೀಸರ ತಡೆ ಒಡ್ಡಿದ ಘಟನೆ ನಡೆದಿದ್ದು, ಈ ವೇಳೆ ಪೋಲೀಸರ ಜೊತೆಗೆ ಹೊಯ್ ಕೈ ಗೆ ಬಿಜೆಪಿ ಕಾರ್ಯಕತರು ಮುಂದಾಗಿದ್ದರು. ಅಲ್ಲದೆ ಈ ವೇಳೆ ಪೋಲೀಸರ ವಿರುದ್ಧ ಮಾಜಿ ಶಾಸಕ ಸಂಜೀವ ಮಠಂದೂರು ಹರಿಹಾಯ್ದು ಪೋಲೀಸರಿಂದ ರಾಜಕಾರಣ ಕಲಿಯುವ ಅಗತ್ಯವಿಲ್ಲ ಎಂದು ಪೋಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಪೋಲೀಸರ ಮನವಿಯನ್ನು ತಿರಸ್ಕರಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಕೃತಿ ದಹಿಸಿದರು.