DAKSHINA KANNADA
ಪುತ್ತೂರು – ರಸ್ತೆ ಬದಿ ನಿಂತಿದ್ದ ಶಾಮಿಯಾನ ಲಾರಿಗೆ ಬೈಕ್ ಡಿಕ್ಕಿ – ಬೈಕ್ ಸವಾರ ಸಾವು

ಪುತ್ತೂರು ಮೇ 19: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಶಾಮಿಯಾನದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಮೇ 18ರ ರಾತ್ರಿ ನಡೆದಿದೆ. ಮೃತರನ್ನು ಬೈಕ್ ಸವಾರ ಕುಂಜೂರುಪಂಜ ಸಮೀಪದ ಸುದೀಪ್ ಚೊಕ್ಕಾಡಿ ಎಂದು ಗುರುತಿಸಲಾಗಿದೆ.
ಪುತ್ತೂರು ಬೈಪಾಸ್ ರಸ್ತೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಉರ್ಲಾಂಡಿಯಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಶಾಮೀಯಾನದ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಬೈಕ್ ಸವಾರ ಸುದೀಪ್ ಚೊಕ್ಕಾಡಿ ಮಚ್ಚಿಮಲೆ ಮನೆಯಿಂದ ನೇರಳಕಟ್ಟೆ ತಂಗಿ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸುದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
ಪುತ್ತೂರು ನಗರ ಸಂಚಾರಿ ಠಾಣೆಯ ಪೊಲೀಸರು ಘಟನ ಸ್ಥಳಕ್ಕೆ ಬಂದು ಪರಿಶೀಲಿಸಿ ದೂರು ದಾಖಲಿಸಿದ್ದಾರೆ.
