DAKSHINA KANNADA
ಪುತ್ತೂರು : ಅಬ್ದುಲ್ ನಾಸಿರ್ ಸಾವು ಪ್ರಕರಣ- 8 ಮಂದಿಯ ವಿರುದ್ಧ ಪ್ರಕರಣ ದಾಖಲು..!

ಅಬ್ದುಲ್ ನಾಸಿರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪುತ್ತೂರು: ಅಬ್ದುಲ್ ನಾಸಿರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಆ.22ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 55/2023 ಕಲಂ 341,323, 506 ಜೊತೆಗೆ 149 ಐಪಿಸಿ ಪ್ರಕರಣ ಮುಂದುವರಿದಂತೆ ವಿಷಪ್ರಾಷಣ ಸೇವಿಸಿ ಚಿಕಿತ್ಸೆಯಲ್ಲಿದ್ದ ಅಬ್ದುಲ್ ನಾಸೀರ್ ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಮೃತ ಅಬ್ದುಲ್ ನಾಸೀರ್ ರವರ ತಾಯಿ ನೆಬಿಸರವರು ನೀಡಿದ ದೂರಿನಂತೆ ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿಗಳಾದ 1.ಸುಮಯ್ಯ, 2.ಅದ್ರಾಮ, 3.ಮೊಯ್ದು, 4.ತಾಜು, 5.ಅಬ್ದುಲ್ಲ, 6.ಸಮೀರ್, 7.ನೌಫಲ್, 8.ಅತ್ತಾವುಲ್ಲಾ ಎಂಬವರುಗಳು ಕಾರಣವೆಂದು ದೂರು ನೀಡಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆಯಲ್ಲಿಅ.ಕ್ರ 80-2023 ಕಲಂ: 306 R/w 34 IPC.ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ತನ್ನ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂದು ಅಬ್ದುಲ್ ನಾಸಿರ್ ರವರು ಸಾವಿನ ಮುನ್ನ ವಿಡಿಯೋ ಮಾಡಿ ಆರೋಪಿಸಿದ್ದರು.
ಆತ್ಮಹತ್ಯೆಗೆ ಯತ್ನಿಸುವ ಮುನ್ನ ‘ನಾನು ಬೆಳ್ಳಾರೆ ಸಮೀಪದ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದು, ಅದ್ರಾಮ ಮತ್ತು ಕುಟುಂಬದವರು ಸೇರಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ನನಗೆ ಹೊಡೆದಿದ್ದಾರೆ’ ಎಂದು ಆರೋಪಿಸಿ ನಾಸಿರ್ ವಿಡಿಯೋ ರೆಕಾರ್ಡ್ ಮಾಡಿದ್ದು, ಇದರಿಂದ ಮನನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು.
ಅದ್ರಾಮ ಹಾಗೂ ಮತ್ತೋರ್ವರ ಜೊತೆ ಕಾರಿನಲ್ಲಿರುವಾಗಲೇ ಅವರ ಎದುರಿಗೇ ಮೊಬೈಲ್ ವೀಡಿಯೋ ಮಾಡಿ ತನ್ನ ನೋವನ್ನು ಹೇಳಿಕೊಂಡಿದ್ದರು.
ಕಾರಿನಲ್ಲಿದ್ದವರನ್ನು ವೀಡಿಯೋದಲ್ಲಿ ತೋರಿಸುತ್ತಾ ನನ್ನ ಸಾವಿಗೆ ಇವರೇ ಕಾರಣ, ನಾನು ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಹೇಳಿ ವೀಡಿಯೋ ಕೊನೆಗೊಳಿಸಲಾಗಿತ್ತು.
ಬಳಿಕ ನಾಸಿರ್ ಅವರು ಪುತ್ತೂರು ರೈಲ್ವೇ ಸ್ಟೇಷನ್ ಬಳಿ ವಿಷ ಸೇವಿಸಿದ್ದಾರೆ ಎನ್ನಲಾಗಿದ್ದು, ಆ ಬಳಿಕ ಅವರನ್ನು ಯಾರೋ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.