DAKSHINA KANNADA
ಪುತ್ತೂರು : ಬಾಲಕಿಯರ ಹಾಸ್ಟೆಲ್ ಒಳಗೆ ನುಗ್ಗಿದ ಆಗಂತುಕ, ದೂರು ನೀಡಿದ್ರೂ ಪೊಲೀಸರ ನಿರ್ಲಕ್ಷ್ಯ..!!
ಬಾಲಕಿಯರ ಹಾಸ್ಟೆಲ್(Girls hostel) ಒಳಗೆ ಆಗಂತುಕ ಓರ್ವ ನುಗ್ಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪಡೀಲ್ ನಲ್ಲಿರುವ ಹಾಸ್ಟೆಲ್ ನಲ್ಲಿ ನಡೆದಿದ್ದು ದೂರು ನೀಡಿದ್ದರೂ ಪರಿಸ್ಥಿತಿಯ ಗಂಭೀರತೆ ಅರಿಯದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪುತ್ತೂರು : ಬಾಲಕಿಯರ ಹಾಸ್ಟೆಲ್ (Girls hostel) ಒಳಗೆ ಆಗಂತುಕ ಓರ್ವ ನುಗ್ಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪಡೀಲ್ ನಲ್ಲಿರುವ ಹಾಸ್ಟೆಲ್ ನಲ್ಲಿ ನಡೆದಿದ್ದು ದೂರು ನೀಡಿದ್ದರೂ ಪರಿಸ್ಥಿತಿಯ ಗಂಭೀರತೆ ಅರಿಯದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನವೆಬರ್ 6 ರಂದು ಈ ಘಟನೆ ನಡೆದಿದ್ದು ಬಾಲಕಿಯರೇ ಇರುವ ಹಾಸ್ಟೆಲ್ ಗೆ ಅಪರಿಚಿತ ವ್ಯಕ್ತಿಯೋರ್ವ ನುಗ್ಗಿದ್ದಾನೆ. ಹಾಸ್ಟೆಲ್‌ನ ಸಿಸಿ ಕ್ಯಾಮಾರಾದಲ್ಲಿ ಆಗಂತುಕನ ಚಲನವಲನ ದಾಖಲಾಗಿದೆ. ಮಧ್ಯ ರಾತ್ರಿ ಸುಮಾರು 2.30 ರಿಂದ 3.30 ರ ವರೆಗೆ ಈ ಆಗಂತುಕ ಹಾಸ್ಟೆಲ್ ಒಳಗೇ ಇದ್ದ ಎನ್ನಲಾಗಿದೆ.
ಆಗಂತುಕನ ಚಲನವಲನವನ್ನು ಹಾಸ್ಟೆಲ್ ಬಾಲಕಿಯೋರ್ವಳು ಧೈರ್ಯ ಮಾಡಿ ವಿಡಿಯೋ ಕೂಡ ಮಾಡಿದ್ದಾಳೆ ಮತ್ತು ಹಾಸ್ಟೆಲ್ ನ ಮೇಲ್ವಿಚಾರಕಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಹಾಸ್ಟೆಲ್ ಸಿಸಿ ಕ್ಯಾಮಾರಾ ಪರಿಶೀಲಿಸಿದ ಹಾಸ್ಟೆಲ್ ವಾರ್ಡನ್ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದ್ರೆ ಇದರ ಗಂಭೀರತೆ ಅರಿಯದ ಪುತ್ತೂರು ಮಹಿಳಾ ಠಾಣೆ ಪೋಲೀಸರು ಪ್ರಕರಣ ದಾಖಲಿಸಲು ಉದಾಸೀನತೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಉನ್ನತ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿದ್ದು ನ.10 ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ನಿರ್ಲಕ್ಷಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.