DAKSHINA KANNADA
ಪುತ್ತೂರು : ಮಹಿಳಾ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಖಾಸಾಗಿ ಬಸ್ ನಿರ್ವಾಹಕನ ವಿರುದ್ದ ಪೊಲೀಸ್ ದೂರು ದಾಖಲಿಸಿದ ಪತ್ರಕರ್ತ..!
ಪುತ್ತೂರು : ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದ ಖಾಸಾಗಿ ಬಸ್ ನಿರ್ವಾಹಕನ ವಿರುದ್ದ ಪತ್ರಕರ್ತರೋರ್ವರು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಬಸ್ ಕಂಡಕ್ಟರ್ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಪತ್ರಕರ್ತ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಎನ್. ಮಹಮ್ಮದ್ ನಝೀರ್ ದೂರು ನೀಡಿದ್ದಾರೆ. ಬಸ್ಸಿನಲ್ಲಿ ಮಹಿಳಾ ಪ್ರಾಯಾಣಿಕರಿಗೆ ತೊಂದರೆ ನೀಡುತ್ತಿದ್ದದನ್ನು ಕ್ಷೇಪಿಸಿದ್ದಕ್ಕಾಗಿ ಅವ್ಯಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಲ್ಲದೆ, ಅರ್ಧದಲ್ಲೇ ಇಳಿಯಲು ಸೂಚಿಸಿದ ಕಂಡಕ್ಟರ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಜ.15ರಂದು ಸಂಜೆ ಮಂಗಳೂರಿಗೆ ಹೋಗಿ ಉಪ್ಪಿನಂಗಡಿಗೆ ಬರುವ ಅರಫಾ ಟೂರ‍್ಸ್ ಆಂಡ್ ಟ್ರಾವೆಲ್ಸ್‌ನ ಬಸ್ಸಿಗೆ ಹತ್ತಿದ್ದು, ಇದರ ನಿರ್ವಾಹಕ ಬಸ್ಸಿನಲ್ಲಿ ತುಂಬಿ ತುಳುಕುಷ್ಟು ಜನರನ್ನು ಹತ್ತಿಸಿದ್ದ ಎನ್ನಲಾಗಿದೆ. ಆಗ ನಿಂತಿದ್ದ ಪ್ರಯಾಣಿಕರನ್ನು ಆತ ಹಿಂದಕ್ಕೆ, ಮುಂದಕ್ಕೆ ತಳ್ಳುತ್ತಾ, ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಕಂಡಕ್ಟರ್ ಪತ್ರಕರ್ತನನ್ನು ಅವ್ಯಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಲ್ಲದೆ, ಬಸ್ಸಿನಿಂದ ಇಳಿದು ಹೋಗುವಂತೆ ತಾಕೀತು ಮಾಡಿದ್ದ ಮಾತ್ರವಲ್ಲ ರಾತ್ರಿ 7ರ ಸಮಯದಲ್ಲಿ ಬಿ.ಸಿ.ರೋಡ್‌ನಲ್ಲಿ ಬಲವಂತವಾಗಿ ಇಳಿದ್ದಾನೆ ಎಂದು ಆರೋಪಿಸಿದ್ದು ನನ್ನ ಮೇಲೆ ಈ ರೀತಿ ದೌರ್ಜನ್ಯ ನಡೆಸಿದ ಬಸ್ ನಿರ್ವಾಹಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎನ್. ಮಹಮ್ಮದ್ ನಝೀರ್ ಅವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.