DAKSHINA KANNADA
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಜಾಗ ಮೀಸಲಿಟ್ಟಿದ್ದು ನಾನು – ಮಾಜಿ ಶಾಸಕಿ ಶಕುಂತಲಾ ಶೆಟ್ಟಿ

ಪುತ್ತೂರು ಮಾರ್ಚ್ 20: ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಜಾಗ ಮೀಸಲಿಟ್ಟಿದ್ದು ನಾನು ಅದಕ್ಕಾಗಿ ಜಾಗಕ್ಕಾಗಿ ಯಾವುದೇ ಅರ್ಜಿ ಹಾಕದೆ ಜಿಲ್ಲಾಧಿಕಾರಿಯವರ ಮುಂದೆ ಮೆಡಿಕಲ್ ಕಾಲೇಜು ಹೆಸರಿನಲ್ಲಿ ಪಹಣಿ ಮಾಡಿದ್ದೇನೆ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಕ್ರೆಡಿಟ್ ವಾರ್ ಜೋರಾಗಿದ್ದು, ಇದೀಗ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಈ ಸ್ಪರ್ಧೆಗೆ ಎಂಟ್ರಿಕೊಟ್ಟಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಮೆಡಿಕಲ್ ಕಾಲೇಜಿಗೆ ಜಾಗ ಹುಡುಕುವ ಸಂದರ್ಭದಲ್ಲಿ ಈಗ ಮೆಡಿಕಲ್ ಕಾಲೇಜು ತಾನು ತಂದಿದ್ದು ಎನ್ನುವವರು ಯಾರೂ ಇರಲಿಲ್ಲ ಪುತ್ತೂರಿನ ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 40 ಎಕರೆ ಜಮೀನು ಬನ್ನೂರು ಪಂಚಾಯತ್ ವಿಎ ಮಾಹಿತಿಯಂತೆ ಜಮೀನು ಗುರುತಿಸಲಾಗಿದೆ, ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಕುಮ್ಕಿ ಜಮೀನಾಗಿದ್ದ ಜಾಗ, ಖಾಸಗಿ ವ್ಯಕ್ತಿಗಳು ಮೆಡಿಕಲ್ ಕಾಲೇಜಿಗೆ ನೀಡಲು ಒಪ್ಪಿದ್ದ ಕಾರಣ ಮೆಡಿಕಲ್ ಕಾಲೇಜು ಹೆಸರಿನಲ್ಲಿಯೇ ಪಹಣಿ ಪತ್ರ ಮಾಡಲಾಗಿದೆ. ಈಗಿನ ಶಾಸಕರು ಸೇರಿದಂತೆ ಕೆಲವರು ಈ ಹಿಂದಿನ ಶಾಸಕರು ಮೆಡಿಕಲ್ ಕಾಲೇಜು ಅರ್ಜಿಯನ್ನು ಪುತ್ತೂರಿನಲ್ಲೇ ಧೂಳು ಹಿಡಿಯಲು ಬಿಟ್ಟಿದ್ದರು ಎಂದಿದ್ದಾರೆ.

ಜಾಗಕ್ಕಾಗಿ ಅರ್ಜಿ ಸಲ್ಲಿಸಿದರೆ ಮಾತ್ರವೇ ಆ ಅರ್ಜಿಯಲ್ಲಿ ಧೂಳು ಹಿಡಿಯೋದು, ನಾನು ಆ ಜಾಗಕ್ಕಾಗಿ ಯಾವುದೇ ಅರ್ಜಿ ಸಲ್ಲಿಸಿಲ್ಲ, ಅದರ ಬದಲು ನೇರವಾಗಿ ಜಾಗ ಗುರುತಿಸಿ ಜಿಲ್ಲಾಧಿಕಾರಿಯ ಮುಂದೆಯೇ ಪಹಣಿ ಪತ್ರ ಮಾಡಿದ್ದೇನೆ ಎಂದರು. ಮೆಡಿಕಲ್ ಕಾಲೇಜು ನಿರ್ಮಾಣದ ಪ್ರಸ್ತಾಪವನ್ನು ಬಜೆಟ್ ನಲ್ಲಿ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮತ್ತು ಈ ಪ್ರಕ್ರಿಯೆಯಲ್ಲಿ ದುಡಿದ ಎಲ್ಲರೂ ಈ ಯಶಸ್ವಿಗೆ ಪಾಲುದಾರರು, ಮೆಡಿಕಲ್ ಕಾಲೇಜು ಆದರೆ ಪುತ್ತೂರಿನ ಅಭಿವೃದ್ಧಿಗೆ ಒಳ್ಳೇದು, ಆದರೆ ಯಾವಾಗ ಆಗುತ್ತೆ ಅನ್ನೋದನ್ನ ಕಾದುನೋಡಬೇಕು ಎಂದರು. ಆಸ್ಪತ್ರೆಯ ಮೊದಲು ಈಗಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕಾದ ವ್ಯವಸ್ಥೆ ಆಗಬೇಕು ಎಂದರು.
ನಾನು ಪಕ್ಷದ ಚಟುವಟಿಕೆಯಿಂದ ದೂರ ಆಗುತ್ತಿಲ್ಲ, ಆದರೆ ಪಕ್ಷವೇ ನನ್ನನ್ನು ವಯಸ್ಸಾಗಿದೆ ಎನ್ನುವ ಕಾರಣಕ್ಕೆ ದೂರ ಮಾಡಿರಬಹುದು, ಪಕ್ಷ ಕಟ್ಟಲು ನನ್ನಿಂದದೂ ಹೆಚ್ಚು ಶಕ್ತಿಯಿರುವವರು ಇದ್ದಿರಬಹುದು, ನಾನು ಕರೆದಲ್ಲೆಲ್ಲಾ ಹೋಗುತ್ತೇನೆ ಎಂದರು. ಆದರೆ ಕರೆಯದೆ ಹೋಗುವ ಜಾಯಾಮಾನ ನನ್ನದಲ್ಲ, ಈಗಿನ ಪುತ್ತೂರು ಶಾಸಕರು ಯುವಕರಿದ್ದಾರೆ, ಪಕ್ಷವನ್ನು ಸಂಘಟಿಸುವಲ್ಲಿ ಶಕ್ತರಾಗಿದ್ದಾರೆ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.
1 Comment