LATEST NEWS
ಉಕ್ರೇನ್ ಜೊತೆ ಮಾತುಕತೆಗೆ ಸಿದ್ದ ಎಂದ ರಷ್ಯಾ…!!

ರಷ್ಯಾ ಡಿಸೆಂಬರ್ 26:ಕೊನೆಗೂ ಕ್ರಿಸ್ಮಸ್ ಸಂದರ್ಭ ರಷ್ಯಾ ಒಂದು ಗುಡ್ ನ್ಯೂಸ್ ಕೊಟ್ಟಿದ್ದು, ಉಕ್ರೇನ್ ಯುದ್ದದಲ್ಲಿ ಭಾಗಿಯಾಗಿರುವ ಎಲ್ಲ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
‘ನಾವು ಸರಿಯಾದ ದಿಕ್ಕಿನಲ್ಲಿ ಸಾಗಿದ್ದೇವೆ ಎನ್ನುವುದು ನಮ್ಮ ನಂಬಿಕೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿ, ನಮ್ಮ ನಾಗರಿಕರ ಹಿತಾಸಕ್ತಿ ಹಾಗೂ ನಮ್ಮ ಜನರ ರಕ್ಷಣೆಯನ್ನು ನಾವು ಮಾಡುತ್ತಿದ್ದೇವೆ. ನಮ್ಮ ದೇಶದ ನಾಗರಿಕರ ರಕ್ಷಣೆ ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ಸಂಘರ್ಷದಲ್ಲಿ ಭಾಗಿಯಾಗಿರುವ ಎಲ್ಲರೊಂದಿಗೆ ಸ್ವೀಕಾರಾರ್ಹ ಪರಿಹಾರಗಳ ಬಗ್ಗೆ ಮಾತುಕತೆಗೆ ನಾವು ಸಿದ್ಧ. ಆದರೆ, ಅದು ಅವರಿಗೆ ಬಿಟ್ಟದ್ದು. ಮಾತುಕತೆಯನ್ನು ನಾವು ನಿರಾಕರಿಸುವವರಲ್ಲ’ ಎಂದು ಸರ್ಕಾರಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಪುಟಿನ್ ಹೇಳಿದ್ದಾರೆ.

ಅಮೆರಿಕ ಉಕ್ರೇನ್‌ಗೆ ಪೂರೈಸಲಿರುವ ಅತ್ಯಾಧುನಿಕ ‘ಪೇಟ್ರಿಯಾಟ್’ ವಾಯು ರಕ್ಷಣಾ ಕ್ಷಿಪಣಿಗಳನ್ನು ನಮ್ಮ ಸೇನೆ ನಾಶಪಡಿಸುವುದು ಖಚಿತ, ನನಗೆ ಶೇ 100ರಷ್ಟು ವಿಶ್ವಾಸವಿದೆ’ ಎಂದೂ ಹೇಳಿದ್ದಾರೆ.