DAKSHINA KANNADA
ಮುಗಿಯದ ಪುತ್ತಿಲ ಪರಿವಾರ ಮತ್ತು ಹಿಂದೂ ಜಾಗರಣ ವೇದಿಕೆ ಒಳಜಗಳ…?
ಪುತ್ತೂರು ಜನವರಿ 02: ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಯುವಕನೊಬ್ಬ ಹಿಂದೂ ಜಾಗರಣ ವೇದಿಕೆ ಮುಖಂಡನಿಗೆ ಬೆದರಿಕೆ ಕರೆ ನೀಡಿದ್ದಾನೆ ಎಂದು ಆರೋಪಿಸಿ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪುತ್ತೂರಿನ ಮುಕ್ವೆ ನಿವಾಸಿ, ಹಿಂದೂ ಜಾಗರಣ ವೇದಿಕೆ ಮುಖಂಡ ಸುಭಾಶ್ ರೈ ಎಂಬ ವ್ಯಕ್ತಿಗೆ, ಮುಂಡೂರು ನಿವಾಸಿ ಧನಂಜಯ ಕಲ್ಲಮ ಎಂಬಾತ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ಸುಭಾಶ್ ರೈ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಧನಂಜಯ ಬೆದರಿಕೆ ಕರೆ ಮಾಡಿರುವುದಲ್ಲದೆ ಮೊಬೈಲ್ ನಂಬರ್ ಇತರರಿಗೂ ನೀಡಿ ಬೆದರಿಕೆಗೆ ಪ್ರಚೋದಿಸಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸುಭಾಶ್ ರೈ ಹಲವಾರು ಬೆದರಿಕೆ ಕರೆಗಳಿಂದ ರಕ್ಷಣೆ ನೀಡುವಂತೆ ಪೋಲೀಸರಿಗೆ ಮನವಿ ಮಾಡಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ನಂತರ ಪುತ್ತಿಲ ಪರಿವಾರದಲ್ಲಿ ಒಳಗೊಳಗೆ ಜಗಳ ಉಂಟಾಗಿತ್ತು. ಆದರೆ ಕೆಲದಿನಗಳಿಂದ ಹಿಂದೂ ಸಂಘಟನೆಯಾಗಲಿ, ಪುತ್ತಿಲ ಪರಿವಾರವಾಗಲಿ ಯಾವುದೇ ಸುದ್ದಿಯಲ್ಲಿರಲಿಲ್ಲ. ಆದ್ರೆ ಇದೀಗ ಬೂದಿ ಮುಚ್ಚಿದ ಕೆಂಡದಂತಿದ್ದ ಹಿಂದೂ ಸಂಘಟನೆ ಮತ್ತು ಪುತ್ತಿಲ ಪರಿವಾರ ಸಂಘಟನೆಗಳ ಒಳಜಗಳ ಮತ್ತೆ ಆರಂಭದ ಸೂಚನೆ ನೀಡಿದಂತಾಗಿದೆ.