LATEST NEWS
ತಮ್ಮ ಸವಿ ಸವಿ ನೆನಪು ನೆನಪು ಬಿಚ್ಚಿಟ್ಟ ಪವರ್ ಸ್ಟಾರ್
ತಮ್ಮ ಸವಿ ಸವಿ ನೆನಪು ನೆನಪು ಬಿಚ್ಚಿಟ್ಟ ಪವರ್ ಸ್ಟಾರ್
ಮಂಗಳೂರು ನವೆಂಬರ್ 9: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ 34 ವರ್ಷಗಳ ಹಿಂದೆ ಶೂಟಿಂಗ್ ನಡೆಸಿದ್ದ ಬೆಟ್ಟದ ಹೂವು ಸಿನೆಮಾ ಚಿತ್ರಿಕರಣ ನಡೆಸಿದ್ದ ಪ್ರದೇಶಗಳಲ್ಲಿ ಭೇಟಿ ನೀಡಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರುವ ಪುನೀತ್ ರಾಜ್ ಕುಮಾರ್, ಈಗ ಸದ್ಯ ಚಿಕ್ಕಮಗಳೂರು ಸುತ್ತಮುತ್ತ ಬೀಡು ಬಿಟ್ಟಿದ್ದಾರೆ. ಚಿತ್ರೀಕರಣದ ಬಿಡುವಿನ ಸಮಯದಲ್ಲಿ 34 ವರ್ಷಗಳ ಬೆಟ್ಟದ ಹೂವು ಸಿನಿಮಾದ ಚಿತ್ರೀಕರಣ ನಡೆದ ಸ್ಥಳ ನೆನಪಾಗಿದ್ದು, ಕೂಡಲೇ ಅಲ್ಲಿಗೆ ಹೋಗಿದ್ದಾರೆ.
ತಾವೊಬ್ಬ ಸ್ಟಾರ್ ಎಂಬುದನ್ನೆ ಮರೆತು ಸಿನಿಮಾಗಾಗಿ ಸೆಟ್ ಹಾಕಿದ್ದ ಸ್ಥಳದ ಹುಡುಕಾಟ ನಡೆಸಿದ್ದಾರೆ. ನಂತರ ಖುದ್ದು ಪುನೀತ್ ಅವರೇ ಸ್ಥಳೀಯರನ್ನು ಪರಿಚಯ ಮಾಡಿಕೊಂಡಿದ್ದು, ಅವರೊಟ್ಟಿಗೆ ಪೋಟೋ ತೆಗೆಸಿಕೊಂಡು ಸರಳತೆ ಮೆರೆದಿದ್ದಾರೆ. ಬೆಟ್ಟದ ಹೂವು ಚಿತ್ರೀಕರಣ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ವಿಡಿಯೋವೊಂದನ್ನು ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.
ಈ ವಿಡಿಯೋ ಇದೀಗ ವೈರಲ್ ಆಗಿದೆ. ಪುನೀತ್ ರಾಜ್ ಕುಮಾರ್ ಅವರಿಗೆ ಹತ್ತು ವರ್ಷವಿದ್ದಾಗ ಬೆಟ್ಟದ ಹೂವು ಸಿನಿಮಾ ಚಿತ್ರೀಕರಿಸಲಾಗಿತ್ತು. ಈ ಸಿನಿಮಾದಲ್ಲಿನ ಅಭಿಯನಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ಕಿಯೂ ಸಿಕ್ಕಿದೆ.34 ವರ್ಷಗಳ ನಂತರ ಮತ್ತೆ ತಮ್ಮ ಬಾಲ್ಯದಲ್ಲಿನ ಮರೆಯಲಾಗದ ಸ್ಥಳಕ್ಕೆ ಹೋಗಿ ಪವರ್ ಸ್ಟಾರ್ ಸಂತೋಷ ಪಟ್ಟಿದ್ದಾರೆ.