LATEST NEWS
ನೂತನ ಪಂಪ್ ವೆಲ್ ಪ್ಲೈಓವರ್ ಬಳಿ ಭೀಕರ ರಸ್ತೆ ಅಪಘಾತ

ನೂತನ ಪಂಪ್ ವೆಲ್ ಪ್ಲೈಓವರ್ ಬಳಿ ಭೀಕರ ರಸ್ತೆ ಅಪಘಾತ
ಮಂಗಳೂರು ಫೆ.8: ಇತ್ತೀಚೆಗಷ್ಟೇ ಉದ್ಘಾಟನೆ ಭಾಗ್ಯ ಕಂಡಿದ್ದ ಮಂಗಳೂರಿನ ಪಂಪ್ ವೆಲ್ ಫ್ಲೈಓವರ್ ಬಳಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಉಡುಪಿ ಕಡೆಯಿಂದ ಕಾಸರಗೋಡು ಕಡೆ ಹೋಗುತ್ತಿದ್ದ ಆಲ್ಟೋ 800 ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಫ್ಲೈ ಓವರ್ ಡಿವೈಡರ್ ಗೆ ಡಿಕ್ಕಿಯಾಗಿ ಎದುರುನಿಂದ ಬರುತ್ತಿದ್ದ ಡಸ್ಟರ್ ಗೆ ಡಿಕ್ಕಿ ಹೊಡೆದು ಎರಡು ರೌಂಡ್ ಪಲ್ಟಿಯಾಗಿ ಫ್ಲೈಓವರ್ ನಿಂದ ಕೆಳಗೆ ಬಿದ್ದಿದೆ. ಢಿಕ್ಕಿಯ ತೀವ್ರತೆಗೆ ಕಾರಿನ ಇಂಜಿನ್ ಕಳಚಿ ಕಾರಿನಿಂದ ನೂರು ಮೀಟರ್ ದೂರದಲ್ಲಿ ಬಿದ್ದಿದೆ.

ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಾಯಗಳಾಗಿದ್ದು ಗಾಯಾಳುಗಳನ್ನು ಪಕ್ಕದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾರದ ಹಿಂದೆ ಉದ್ಘಾಟನೆಯಾಗಿದ್ದ ಪಂಪ್ ವೆಲ್ ಫ್ಲೈಓವರ್ ಓವರ್ ನಲ್ಲಿ ನಡೆದ ಮೊದಲ ಅಪಘಾತ ಇದಾಗಿದೆ. ಮಂಗಳೂರು ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.