LATEST NEWS
ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಕೊಲ್ಲೂರು ದೇವಸ್ಥಾನ ಭೇಟಿ

ಉಡುಪಿ ಸೆಪ್ಟೆಂಬರ್ 18: ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರಾಗಿರುವ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಗುರುವಾರ ರಾತ್ರಿಯ ವೇಳೆಗೆ ದೇವಸ್ಥಾನಕ್ಕೆ ಬಂದು ತಂಗಿದ್ದರು. ಇಂದು ಮುಂಜಾನೆ ಕೊಲ್ಲೂರು ಮೂಕಾಂಬಿಕೆ ದರ್ಶನ ಕೈಗೊಂಡರು.
ದೇವಿಯ ಸನ್ನಿಧಿಯಲ್ಲಿ ಚಂಡಿಕಾ ಹೋಮವನ್ನು ನಡೆಸಿದರು. ಆಡಳಿತ ಮಂಡಳಿಯ ವತಿಯಿಂದ ಸಿಎಂ ನಾರಾಯಣಸ್ವಾಮಿ ಅವರನ್ನು ಗೌರವಿಸಲಾಯಿತು.ವರ್ಷಂಪ್ರತಿ ತಪ್ಪದೇ ದೇವಳಕ್ಕೆ ಭೇಟಿ ನೀಡುವ ನಾರಾಯಣ ಸ್ವಾಮಿ ಕ್ಷೇತ್ರದಲ್ಲಿ ಚಂಡಿಕಾಹೋಮ ನಡೆಸುತ್ತಾರೆ.
