Connect with us

DAKSHINA KANNADA

ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಪೂಡಾ) ಅಧ್ಯಕ್ಷ ದಿಢೀರ್ ರಾಜೀನಾಮೆ – ಶಾಸಕ ಅಶೋಕ್ ರೈ ವಿರುದ್ದ ಕಾಂಗ್ರೇಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ

ಪುತ್ತೂರು ಜುಲೈ 13: ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಪೂಡಾ) ಅಧ್ಯಕ್ಷ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿ ಕೇವಲ ಒಂದು ತಿಂಗಳ ಕಳೆಯುವುದರೊಳಗೇ ಬಾಸ್ಕರ ಕೋಡಿಂಬಾಳ ರಾಜೀನಾಮೆ ಸಲ್ಲಿಸಿದ ಪೂಡಾ ಅಧ್ಯಕ್ಷ. ಪುತ್ತೂರು ಶಾಸಕರಿಂದ ಪರೋಕ್ಷ ಒತ್ತಡ ಹಿನ್ನಲೆಯಲ್ಲಿ ರಾಜೀನಾಮೆ ಸಲ್ಲಿಸಿದಾಗಿ ತಿಳಿದು ಬಂದಿದೆ.


ಕಾಂಗ್ರೆಸ್ ಪಕ್ಷ ನನಗೆ ಹಲವಾರು ಹುದ್ದೆ ನೀಡಿದೆ, ಅದನ್ನು ನಿಭಾಯಿಸಿದ್ದೇನೆ.‌ ಇತ್ತೀಚೆಗೆ ಪುಡಾ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಶಾಸಕರೇ ನೇಮಕ ಮಾಡಿದ್ದರು. ಆದರೆ ಅವರೇ ಮೊನ್ನೆ ಬೆಂಗಳೂರಿನಿಂದ ಪುಡಾ ಡೆಡ್ ಆಗಿದೆ. ನಿಮ್ಮ ಕೆಲಸ ಸಾಕಾಗುವುದಿಲ್ಲ ಎಂದು ಕರೆ ಮಾಡಿ ತಿಳಿಸಿದ್ದಾರೆ. ಇದು ನನಗೆ ತುಂಬಾ ಬೇಸರಗೊಂಡು‌ ಮೂರು ದಿನ ಕಳೆದು ನಾನು ಸರಕಾರಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಭಾಸ್ಕರ್ ಕೋಡಿಂಬಾಳ ಅವರು ನಾನು ಸ್ವಲ್ಪ ಸ್ವಾಭಿಮಾನಿ. ಇವತ್ತು ನನ್ನನ್ನು ಯಾರು ನೇಮಕ ಮಾಡಿದ್ದಾರೋ ಅವರಿಗೆ ಅಸಮಾಧಾನ ಇದೆಯೋ ಗೊತ್ತಿಲ್ಲ. ಆದರೆ ನನಗಂತು ಬೇಸರ ಆಗಿದೆ. ನಾನು ಹುದ್ದೆ ಅಪೇಕ್ಷೆ ಮಾಡಿದವನಲ್ಲ. ಎಲ್ಲವೂ ತನ್ನಿಂದ ತಾನೆ ಬಂದದ್ದು ಎಂದವರು ಬೇಸರದಿಂದಲೇ ಮಾತನಾಡಿದರು. ರಾಜೀನಾಮೆ ಪತ್ರವನ್ನು ಸರಕಾರಕ್ಕೆ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿ ಕೊಟ್ಟಿರುವುದಾಗಿ ಅವರು ಹೇಳಿದ್ದಾರೆ.

ಅಧಿಕಾರ ವಹಿಸಿ ಒಂದು ತಿಂಗಳಲ್ಲಿ ಪುತ್ತೂರಿನ ಜನತೆಯ ಪ್ರಮುಖ ಸಮಸ್ಯೆಯಾದ ಕಟ್ ಕನ್ವರ್ಷನ್ ಬಗ್ಗೆ ಸಭೆ ನಡೆಸಲಾಗಿತ್ತು ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲೂ ಪ್ರಯತ್ನಿಸಲಾಗಿತ್ತು. ಆದರೆ ಈ ನಡುವೆಯೇ ಶಾಸಕರು ನನ್ನ ಬಗ್ಗೆ ಅಸಮಾಧಾನಪಟ್ಟಿದ್ದಾರೆ. ಈ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ, ಸರಿಯಾಗಿ ಕೆಲಸ ಮಾಡುವ ವಾತಾವರಣ ಇಲ್ಲದ ಕಾರಣ ರಾಜೀನಾಮೆ ಎಂದರು. ಈ ಮೊದಲು ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರೂ ರಾಜೀನಾಮೆ ನೀಡಿದ್ದರು, ಒಟ್ಟಾರೆ ಶಾಸಕ ಅಶೋಕ್ ರೈ ಕಾರ್ಯವೈಖರಿಗೆ ಕಾಂಗ್ರೇಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಎದ್ದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *