LATEST NEWS
ಮಲ್ಪೆ – ಕಿಟಕಿಗೆ ಬೆಲ್ಟ್ ಕಟ್ಟಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪಿಯು ವಿಧ್ಯಾರ್ಥಿ

ಮಲ್ಪೆ ಜುಲೈ 29: ಕೆಳಾರ್ಕಳಬೆಟ್ಟು ಗ್ರಾಮದ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸ್ವಸ್ತಿಕ್ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.
ಆತನ ತಾಯಿ ಜಯಂತಿ, ಮಗಳ ಮೆಡಿಕಲ್ ಸರ್ಟಿಫಿಕೆಟ್ ತರಲು ನೇಜಾರಿಗೆ ಹೋಗಿದ್ದು, ವಾಪಸ್ ಮನೆಗೆ ಬಂದಾಗ ಕಿಟಕಿಗೆ ಬೆಲ್ಟ್ ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಸೋಫಾದ ಮೇಲೆ ಒರಗಿಕೊಂಡು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದ. ಕೂಡಲೆ ಬೆಲ್ಸನ್ನು ತುಂಡರಿಸಿ ನೆರೆಮನೆಯವರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು.
