DAKSHINA KANNADA
ಉಪ್ಪಿನಂಗಡಿ: ಪ್ರತಿಭಟನಾಕಾರರನ್ನು ತಡೆಯಲು ಮುಂದಾದ ಎಸ್.ಐ.ಗೆ ಚೂರಿ ಇರಿತ, ಪಿಸ್ತೂಲ್ ಗೆ ‘ಧರ್ಮ’ವಿಲ್ಲ ಎಂದ ಬಂಟ್ವಾಳ ಎಸ್.ಐ ನಾಗರಾಜ್ ವಿಡಿಯೋ ವೈರಲ್
ಉಪ್ಪಿನಂಗಡಿ, ಡಿಸೆಂಬರ್ 15: ಕೊಲೆಯತ್ನ ಆರೋಪದ ಪ್ರಕರಣದಲ್ಲಿ ಬಂಧಿತರಾದವರನ್ನು ಬಿಡುಗಡೆಗೊಳಿಸುವಂತೆ ಪಿ.ಎಫ್. ಐ.ಸಂಘಟನೆಯವರು ಪ್ರತಿಭಟನೆ ನಡೆಸಿದ್ದಲ್ಲದೆ ಠಾಣೆಗೆ ಮುತ್ತಿಗೆ ಹಾಕಲು ಮುಂದಾದಾಗ ಪೋಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.
ಇದೇ ವೇಳೆ ಠಾಣೆ ಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ ಸಂದರ್ಭದಲ್ಲಿ ಬಂದೋಬಸ್ತ್ ಗಾಗಿ ತೆರಳಿದ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರಿಗೆ ಸಂಘಟನೆ ಕಾರ್ಯಕರ್ತರು ಚೂರಿ ಇರಿದ ಘಟನೆ ನಡೆದಿದ್ದು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಪೋಲೀಸ್ ಇನ್ಸ್ ಪೆಕ್ಟರ್ ಉಮೇಶ್, ಮಹಿಳಾ ಎಸ್.ಐ ವಾಮನ ಕುಟ್ಟಿ ಹಾಗೂ ಸಿಬ್ಬಂದಿ ಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಯಗೊಂಡಿದ್ದಾರೆ. ಗಾಯಗೊಂಡ ಅಧಿಕಾರಿಗಳ ಸಹಿತ ಸಿಬ್ಬಂದಿ ಗಳು ಚಿಕಿತ್ಸ ಬೇರೆ ಬೇರೆ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿಭಟನೆಕಾರರಿಗೆ ಲಾಠಿ ಚಾರ್ಜ್ ಮಾಡುವ ಮೊದಲು ಬಂಟ್ವಾಳ ಗ್ರಾಮಾಂತರ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರು ಬುದ್ದಿ ಮಾತು ಹೇಳಿದ ವಿಡಿಯೋ ವೈರಲ್ ಆಗಿದೆ. ಲಾಠಿ ಚಾರ್ಜ್ ನಲ್ಲಿ ಅನೇಕ ಪ್ರತಿಭಟನಾಕಾರರಿಗೂ ಗಾಯವಾಗಿದೆ.