BELTHANGADI
ಕಕ್ಕಿಂಜೆಯ ಅಕ್ರಮ ಕಸಾಯಿಖಾನೆಗಳ ಮೇಲೆ ನೇರ ಕಾರ್ಯಾಚರಣೆ – ಭಜರಂಗದಳ ಮುಖಂಡ ಪುನೀತ್ ಅತ್ತಾವರ
ಬೆಳ್ತಂಗಡಿ ಜನವರಿ 06: ನೇತ್ರಾವತಿ ನದಿಯಲ್ಲಿ ಪ್ರಾಣಿಗಳ ಮಾಂಸ ತಂದು ಹಾಕಿ ಅಪವಿತ್ರ ಮಾಡುತ್ತಿರುವ ಘಟನೆ ಖಂಡಿಸಿ ವಿಎಚ್ ಪಿ ಮತ್ತು ಬಜರಂಗದಳ ಕಾರ್ಯಕರ್ತ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಭಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಕಕ್ಕಿಂಜೆ ಗ್ರಾಮದ ಅಕ್ರಮ ಕಸಾಯಿಖಾನೆಗಳನ್ನು ತಕ್ಷಣ ಪೊಲೀಸರು ಮುಚ್ಚಿಸಬೇಕು, ಇಲ್ಲದಿದ್ದರೆ ಕಕ್ಕಿಂಜೆಯ ಅಕ್ರಮ ಕಸಾಯಿಖಾನೆಗಳ ಮೇಲೆ ವಿಎಚ್ ಪಿ-ಭಜರಂಗದಳ ನೇರ ಕಾರ್ಯಾಚರಣೆ ನಡೆಸಲಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾದ್ರೆ ಪೊಲೀಸರು ಮತ್ತು ಸರ್ಕಾರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಗೆ ಪೊಲೀಸ್ ಅನುಮತಿ ಇಲ್ಲ ಅಂತ ಹೇಳಿದ್ರು, ಆದರೆ ಗೋವಿನ ರಕ್ಷಣೆಗೆ ಪ್ರತಿಭಟನೆ ಮಾಡಲು ಯಾವುದೇ ದೊಣ್ಣೆ ನಾಯಕನ ಅನುಮತಿ ಅಗತ್ಯ ಇಲ್ಲ, ನೇತ್ರಾವತಿ ನದಿ ನೀರು ಧರ್ಮಸ್ಥಳ ಮಂಜುನಾಥನ ಅಭಿಷೇಕಕ್ಕೆ ಬಳಕೆಯಾಗುತ್ತೆ. ಹಿಂದೂಗಳ ಭಾವನೆಗೆ ಧಕ್ಕೆ ಮಾಡಲೆಂದೇ ಈ ಕೃತ್ಯ ಎಸಗಲಾಗಿದೆ. ಚಾರ್ಮಾಡಿಯಿಂದ ಮಂಗಳೂರುವರೆಗೆ ಗೋ ಮಾಂಸ ಮಾರಾಟ ಆಗ್ತಿದೆ, ಇವತ್ತು ನಾವು ಸಹಿಸಿದಷ್ಟು ಸಹಿಸಿದೆವು, ಹೋರಾಟ ಮಾಡಿದಷ್ಟು ಮಾಡಿದೆವು, ಆದರೆ ಇನ್ನು ಸಹಿಸಲ್ಲ, ಬಿಷ್ನೋಯ್ ಕೃಷ್ಣಮೃಗ ವಿಚಾರದಲ್ಲಿ ಸಲ್ಮಾನ್ ಖಾನ್ ಹಿಂದೆ ಬಿದ್ದಿದ್ದಾನೆ, ಗೋ ಹತ್ಯೆ ವಿಚಾರದಲ್ಲಿ ಭಜರಂಗದಳ ಕಾರ್ಯಕರ್ತರು ಬಿಷ್ನೋಯ್ ಅದ್ರೆ ಮುಸಲ್ಮಾನರು ಏನ್ ಮಾಡ್ತಾರೆ. ಕಕ್ಕಿಂಜೆ ಭಾಗದ ಎಲ್ಲಾ ಮುಸ್ಲಿಂ ಧರ್ಮಗುರುಗಳಿಗೆ ಹೇಳ್ತಾ ಇದೀವಿ, ನಿಮ್ಮವರು ಗೋ ಹತ್ಯೆ ಮುಂದುವರಿಸಿದ್ರೆ ಭಜರಂಗದಳ ಫೀಲ್ಡಿಗಿಳಿಯುತ್ತೆ, ಪ್ರತೀ ಗ್ರಾಮ ಗ್ರಾಮಗಳಲ್ಲಿ ದಂಡ ಹಿಡಿದು ಭಜರಂಗದಳ ಕಾರ್ಯಕರ್ತರು ಮಟ್ಟ ಹಾಕ್ತಾರೆ. ಒಂದು ಗೋವಿಗಾಗಿ ಇಡೀ ಊರಿಗೆ ಬೆಂಕಿ ಬಿದ್ದ ಇತಿಹಾಸ ಮಂಗಳೂರಿನಲ್ಕಿ ಇದೆ. ಗೋ ಮಾತೆಯ ರಕ್ಷಣೆಗಾಗಿ ಹಿಂದೂ ಸಮಾಜ ಯಾವುದೇ ತ್ಯಾಗಕ್ಕೂ ಸಿದ್ದ ಎಂದರು.