DAKSHINA KANNADA
ಕಸ್ತೂರಿ ರಂಗನ್ ವರದಿ ವಿರುದ್ಧ ಎ.ಸಿ.ಕಚೇರಿ ಎದುರು ಬೃಹತ್ ಜನಜಾಗೃತಿ ಸಭೆಗೆ ನಿರ್ಧಾರ
ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ಯೋಜನೆ ವಿರುದ್ಧದ ಹೋರಾಟದ ಸಮಾಲೋಚನೆ ಸಭೆ ಮತ್ತು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಸಭೆ ಶನಿವಾರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಜರಗಿತು.
ಕಸ್ತೂರಿ ರಂಗನ್ ವರದಿ ಯೋಜನೆ ವಿರುದ್ದ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳೊಳಗಾಗಿ ದ.ಕ.ಜಿಲ್ಲೆಯ ಸುಳ್ಯ, ಕಡಬ ಮತ್ತು ಬೆಳ್ತಂಗಡಿ ತಾಲೂಕುಗಳ ತಹಸೀಲ್ದಾರ್ ಕಚೇರಿ ಎದುರು 10 ಸಾವಿರ ಮಂದಿಯನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಈ ಹಿನ್ನಲೆ ಪೂರ್ವಭಾವಿ ಜಾಗೃತಿ ಮೂಡಿಸಲು ತಾಲೂಕುಗಳಲ್ಲಿ ಬೈಕ್ ರಾಲಿ, ಯೋಜನೆ ಬಾದಿತ ಪ್ರತೀ ಗ್ರಾಮ ಪಂಚಾಯತ್ ಗಳಲ್ಲಿ ಸರಕಾರಕ್ಕೆ ಮನವಿ ಸಲ್ಲಿಕೆ, ಪ್ರಚಾರ, ಕರಪತ್ರ ಹಂಚುವಿಕೆ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ನವೆಂಬರ್ 24 ರಂದು ಕಡಬ, ನವೆಂಬರ್ 27 ರಂದು ಸುಳ್ಯ ತಹಶಿಲ್ದಾರರ ಕಚೇರಿ ಎದುರು ಬೃಹತ್ ಪ್ರತಿಭಟನೆ, ಡಿಸೆಂಬರ್ ಮೊದಲ ವಾರದಲ್ಲಿ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ವೇದಿಕೆ ಸಂಚಾಲಕ ಕಿಶೋರ್ ಅದರ ಶಿರಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಭಾನುಪ್ರಕಾಶ್ ಪೆರುಮುಂಡ, ರವಿ ರುದ್ರಪಾದ, ವಿಜಯ್ ಶಿರಾಡಿ, ಭರತ್ ಕನ್ನಡ್ಕ,ಸದಸ್ಯರಾದ ಶ್ರೀಕಾಂತ್ ಶಿರಾಡಿ, ಮಹಮ್ಮದ್ ಅಲಿ ಬಲ್ಯ, ಟಿ.ಕೆ.ಥೋಮಸ್, ಸುಂದರ, ಸಂಪತ್ ಎಂ.ಆರ್, ಧನಂಜಯ ಕೊಡಂಗೆ, ಉಮೇಶ್ ಕಜ್ಜೋಡಿ, ಶೇಖರಪ್ಪ ಬೆಂಡೋಡಿ, ಜಯರಾಮ ಕಟ್ಟೆಮನೆ, ದಿನೇಶ್ ಕರ್ಮಲ ಪುತ್ತೂರು, ಪ್ರದೀಪ್ ಕುಮಾರ್ ಬನ್ನೂರು ಪಟ್ಟೆ ಕರಿಕೆ ಉಪಸ್ಥಿತರಿದ್ದರು.