LATEST NEWS
ಹರ್ಷ ಕೊಲೆಯ ಆರೋಪಿಗಳನ್ನು ಒಂದೋ ಗಲ್ಲಿಗೇರಿಸಿ ಇಲ್ಲವೇ ಎನ್ ಕೌಂಟರ್ ಮಾಡಿ

ಉಡುಪಿ : ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಹಲವು ಪ್ರತಿಭಟನೆಗಳಲ್ಲಿ ಆಕ್ರೋಶದ ಮಾತುಗಳು ಕೇಳಿ ಬರಲಾರಂಭಿಸಿದೆ, ಉಡುಪಿಯಲ್ಲಿ ಭಜರಂಗಳದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ ಆರ್ ಹರ್ಷ ಕೊಲೆಯ ಆರೋಪಿಗಳನ್ನು ಒಂದೋ ಗಲ್ಲಿಗೇರಿಸಿ ಇಲ್ಲವೇ ಎನ್ ಕೌಂಟರ್ ಮಾಡಿ ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಧರ್ಮದ ಪರವಾಗಿ ಕೆಲಸ ಮಾಡುವ ಕಾರ್ಯಕರ್ತರನ್ನು ಗುರಿ ಮಾಡಿದ್ದೀರಿ.ಈವರೆಗೆ 29 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ನಾವು ಮಾನಸಿಕವಾಗಿ ಕುಗ್ಗಲ್ಲ. ಗಲ್ಲಿ ಗಲ್ಲಿಯಲ್ಲಿ ಬಜರಂಗದಳದ ಕಾರ್ಯಕರ್ತರು, ಹರ್ಷ ನಂತರವರು ಹುಟ್ಟುತ್ತಾರೆ.
ದಾಳಿಗಳು ನಡೆದರೂ ಸಮರ್ಥ ಎದುರಿಸುತ್ತೇವೆ. ನಾವು ಯಾವುದಕ್ಕೂ ತಯಾರಾಗಿದ್ದೇವೆ.ಯಾರು ಅಧರ್ಮ ಮಾಡ್ತಾರೋ ಅವರಿಗೆ ಅದರ್ಮದಿಂದಲೇ ಉತ್ತರ ಕೊಡಬೇಕು ಎಂದು ಆಕ್ರೋಶದ ನುಡಿಗಳನ್ನು ಆಡಿದ್ದಾರೆ.

ನಾವು ಬಜರಂಗಿಗಳು ಎಲ್ಲವನ್ನೂ ಎದುರಿಸುತ್ತೇವೆ. ಪಿಎಫ್ ಐ, ಎಸ್ ಡಿಪಿ ಐ ನಮಗೆ ಯಾವ ಲೆಕ್ಕ.ಹಿಂದೂ ಸಾತ್ವಿಕ ಸಮಾಜವನ್ನು ಹತ್ಯೆ ಮಾಡಲು ದುಷ್ಟ ಶಕ್ತಿಗಳು ತರಬೇತಿ ನೀಡಿದ್ದಾರೆ. ಜೈಲಿನೊಳಗೆ ಚಮಚದಲ್ಲಿ ಜಿಹಾದಿಗಳನ್ನು ಕೊಚ್ಚಿ ಹಾಕಿದ್ದೇವೆ ಇದು ಗೊತ್ತಿರಲಿ. ಹಿಂದೂ ಕಾರ್ಯಕರ್ತನ ಹತ್ಯೆಗೆ ಹಿಂದೂ ಸಮಾಜ ತಕ್ಕ ಉತ್ತರವನ್ನು ಕೊಟ್ಟೆ ಕೊಡುತ್ತೆ.
ದೇಶಕ್ಕೋಸ್ಕರ ಯಾವ ಬಲಿದಾನಕ್ಕೂ ಸಿದ್ದ ಎಂದರು.ನೀವುಗಳು ಒಂದು ಯೋಚನೆ ಮಾಡಿ ಶೇ 80 ರಷ್ಟು ಹಿಂದೂಗಳು ನಿಮಗೆ ವಿರುದ್ಧ ತಿರುಗಿ ನಿಂತ್ರೆ ನಿಮ್ಮ ಗತಿ ಏನು?.. ಈ ದೇಶದಲ್ಲಿ ನಿಮ್ಮ ಆಟ ನಡೆಯಲ್ಲ. ಇವತ್ತು ಹರ್ಷನನ್ನು ಮುಟ್ಟಿದ್ದೀರಿ. ಇದಕ್ಕೆ ನೂರಕ್ಕೆ ನೂರುಷ್ಟು ಪ್ರತ್ಯುತ್ತರವನ್ನು ನಾವು ಕೊಟ್ಟೆ ಕೊಡ್ತೇವೆ. ಪೊಲೀಸರೇ ಒಂದೋ ಆರೋಪಿಗಳನ್ನು ಗಲ್ಲಿಗೇರಿಸಿ ಇಲ್ಲವೇ ಎನ್ಕೌಂಟರ್ ಮಾಡಿ ಎಂದು ಗುಡುಗಿದ್ದಾರೆ.