DAKSHINA KANNADA
ಅಂಬೇಡ್ಕರ್ ಭವನವನ್ನು ಕಾಯ್ದಿರಿಸಿದ ಜಾಗದಲ್ಲೇ ನಿರ್ಮಿಸಲು ಒತ್ತಾಯಿಸಿ ಪ್ರತಿಭಟನೆ…..
ಪುತ್ತೂರು ನವೆಂಬರ್ 8: .ಪುತ್ತೂರು ತಾಲೂಕು ಅಂಬೇಡ್ಕರ್ ಭವನ ಮೊದಲು ಕಾಯ್ದಿರಿಸಿದ್ದ ಸ್ಥಳದಲ್ಲೇ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಭವನ ಹೋರಾಟ ಸಮಿತಿಯ ಕಾರ್ಯಕರ್ತರು ಪುತ್ತೂರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅಂಬೇಡ್ಕರ್ ಭವನವನ್ನು ಈ ಮೊದಲು ನಿರ್ಧರಿಸಿದ ಸ್ಥಳದಲ್ಲೇ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ಪಹಣಿ ಪತ್ರವನ್ನು ಮುಂದಿನ 15 ದಿನಗಳ ಒಳಗೆ ಮತ್ತೆ ಅಂಬೇಡರ್ ನಿವೇಶನದ ಹೆಸರಿಗೆ ಮಾಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಇಲ್ಲವಾದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ವಿಧಾನ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಪ್ರತಿಭಟನೆಯ ಮನವಿ ಸ್ವೀಕರಿಸಲು ಆರಂಭದಲ್ಲಿ ಸಹಾಯಕ ಕಮೀಷನರ್ ಬರಬೇಕೆಂದು ಪಟ್ಟು ಹಿಡಿದ ಮುಖಂಡರು ಬಳಿಕ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಅವರ ಉತ್ತರ ಸಮರ್ಪಕವಾಗಿಲ್ಲ ಎಂದು ಆಕ್ರೋಶಗೊಂಡು ಮಿನಿ ವಿಧಾನ ಸೌಧ ಒಳ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.
ಈ ಸಂದರ್ಭ ಮಾತನಾಡಿದ ಬೆಂಗಳೂರು ಛಲವಾದಿ ಬ್ರಿಗೇಡ್‌ನ ಕಾರ್ಯದರ್ಶಿ ಹರೀಶ್ ಅವರು ಮಾತನಾಡಿ ಶಾಸಕರಿಗೆ ಸ್ವಲ್ಪ ಮಾನವೀಯತೆ ಇದ್ದರೆ ಆದಷ್ಟು ಬೇಗ ಪಹಣಿ ಪತ್ರವನ್ನು ಅಂಬೇಡ್ಕರ್ ಭವನದ ಹೆಸರಿಗೆ ಮಾಡಿಸಿ ಕೊಡಲಿ. ಇಲ್ಲವಾದರೆ ಮುಂದಿನ ದಿನ ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ಕುರಿತು ಎಚ್ಚರಿಕೆ ನೀಡಿದ ಅವರು ವಿಧಾನ ಸೌಧ ಚಲೋ ಚಳುವಳಿ ಆರಂಭಿಸಲಿದ್ದೇವೆ ಎಂದರು.