LATEST NEWS
ಕಡಬದಲ್ಲಿ ದಲಿತ ಮಹಾ ಒಕ್ಕೂಟದ ಪ್ರತಿಭಟನೆ

ಕಡಬದಲ್ಲಿ ದಲಿತ ಮಹಾ ಒಕ್ಕೂಟದ ಪ್ರತಿಭಟನೆ
ಪುತ್ತೂರು ಅಕ್ಟೋಬರ್ 29 ಕಡಬ ಪೊಲೀಸ್ ಉಪ ನಿರೀಕ್ಷಕರು ಹಾಗೂ ಕಡಬ ತಹಶಿಲ್ದಾರರು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಡಬ ತಾಲೂಕು ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ಕಡಬದಲ್ಲಿ ಪ್ರತಿಭಟನೆ ನಡೆಯಿತು.
ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಹಾಗೂ ಕಡಬ ತಹಶೀಲ್ದಾರರಾದ ಜಾನ್ ಪ್ರಕಾಶ್ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಅವರ ಮೇಲೆ ಶಿಸ್ತು ಕ್ರಮವನ್ನು ಕೈಗೊಂಡು ತಕ್ಷಣವೇ ವರ್ಗಾಯಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಡಬ ಪೇಟೆಯಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು ಆ ಬಳಿಕ ಕಡಬ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ನಂತರ ಕಡಬ ತಹಶಿಲ್ದಾರ್ ಕಛೇರಿಯ ಮುಂಭಾಗದಲ್ಲಿ ಘೋಷಣೆ ಕೂಗಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕಾಗಿ ಪಟ್ಟನ್ನೂ ಕೂಡಾ ಪ್ರತಿಭಟನಾಕಾರರು ಹಿಡಿದರು.