LATEST NEWS
ಯೋಗಕ್ಷೇಮ ನೋಡಿಕೊಳ್ಳದ ಮಕ್ಕಳಿಗೆ ನೀಡಿದ್ದ ಆಸ್ತಿ ಪೋಷಕರಿಗೆ ವಾಪಸ್!

ಚೆನ್ನೈ, ಮಾರ್ಚ್ 20: ಹಿರಿಯ ನಾಗರಿಕರ ಯೋಗಕ್ಷೇಮ ನೋಡಿಕೊಳ್ಳಲು ಅವರ ಮಕ್ಕಳು ಅಥವಾ ಸಂಬಂಧಿಕರು ವಿಫಲರಾದಲ್ಲಿ ಹಿರಿಯ ನಾಗರಿಕರು ಅಂಥವರಿಗೆ ಈ ಹಿಂದೆ ವರ್ಗಾಯಿಸಿರಬಹುದಾದ ಗಿಫ್ಟ್ ಡೀಡ್ ಅಥವಾ ಸೆಟಲ್‌ಮೆಂಟ್ ಡೀಡ್ ಆಸ್ತಿಯನ್ನು ಹಿಂಪಡೆಯಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಎಸ್.ನಾಗಲಕ್ಷ್ಮೀ ಎಂಬ ಮೃತ ಮಹಿಳೆಯ ಸೊಸೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದ್ದು, ಆಸ್ತಿ ವರ್ಗಾವಣೆಯು ಕೇವಲ ಕಾನೂನು ಪ್ರಕ್ರಿಯೆಯಾಗಿರದೆ, ವೃದ್ಧಾಪ್ಯದಲ್ಲಿ ಆರೈಕೆ ಪಡೆಯುವ ಭರವಸೆಯಿಂದ ಕೈಗೊಂಡ ನಿರ್ಧಾರವೂ ಆಗಿರುತ್ತದೆ ಎಂದಿದೆ.

ಪುತ್ರ ತಮ್ಮನ್ನು ಆರೈಕೆ ಮಾಡಿಲ್ಲ ಎಂಬ ಕಾರಣಕ್ಕೆ ನಾಗಲಕ್ಷ್ಮೀ ತಮ್ಮ ಪುತ್ರನಿಗೆ ನೀಡಿದ್ದ ಸೆಟಲ್‌ಮೆಂಟ್ ಡೀಡ್‌ನ್ನು ರದ್ದು ಮಾಡಿಸಿದ್ದರು. ಅದನ್ನು ಪ್ರಶ್ನಿಸಿ ಸೊಸೆ ಹೈಕೋರ್ಟ್ ಮೆಟ್ಟಿಲೇರಿದ್ದರು.
2 Comments