LATEST NEWS
ನಿಷೇಧಿತ ತ್ರಿವಳಿ ತಲಾಖ್ ಬೆಳಕಿಗೆ: ಮದುವೆಯಾದ 6 ತಿಂಗಳಲ್ಲೆ ಪತ್ನಿಗೆ ಮಾರಾಣಾಂತಿಕ ಹಲ್ಲೆ ನಡೆಸಿ ತಲಾಖ್

ಮಂಗಳೂರು, ಮೇ 30: ತ್ರಿವಳಿ ತಲಾಖ್ ನಿಷೇಧಿಸಲ್ಪಟ್ಟಿದ್ದರೂ ಇದೀಗ ಮಂಗಳೂರಿನಲ್ಲಿ ಮತ್ತೇ ಬೆಳಕಿಗೆ ಬಂದಿದೆ. ಮಾರ್ನಮಿ ಕಟ್ಟೆಯ ಮಹಮ್ಮದ್ ಹುಸೇನ್ ಎಂಬಾತನು ಮದುವೆಯಾಗಿ ಆರು ತಿಂಗಳು ಆದಗಲೇ ಆತನ ಪತ್ನಿಯ ಮೇಲೆ ಹಲ್ಲೆ ನಡೆಸಿ ತಲಾಖ್ ನೀಡಿ ಆಕೆಯನ್ನು ಮನೆಯಿಂದ ಹೊರದಬ್ಬಿದ್ದಾನೆ.
ಹಣ್ಣು ತರಕಾರಿ ವ್ಯಾಪಾರಿಯಾಗಿದ್ದ ಮಾರ್ನಮಿ ಕಟ್ಟೆಯ ಮಹಮ್ಮದ್ ಹುಸೇನ್ 6 ತಿಂಗಳ ಹಿಂದೆ ಶಬನಾ ಎಂಬಾಕೆಯನ್ನು ಮದುವೆಯಾಗಿ ಆಕೆಯ ಮೇಲೆ ಹಲ್ಲೆ ನಡೆಸಿ ತಲಾಖ್ ಕೊಟ್ಟು ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ ಎನ್ನಲಾಗಿದೆ.

ಹುಸೇನ್ ನನು ಶಬಾನಾ ಎಂಬವರನ್ನು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಗೆ 2 ಮಕ್ಕಳು ಇದ್ದು, ಆಕೆಯಿಂದ ಹಣ ಪಟಾಯಿಸಿ ತಲಾಕ್ ನೀಡಿದ್ದನು. ಬಳಿಕ ಶಬಾನಾ ಅವರನ್ನು ಮದುವೆಯಾಗಿ 8 ದಿನದಲ್ಲಿ ಹಣ ಒಡವೆ ಸೇರಿ 10 ಲಕ್ಷ ರೂ. ಹಣ ಪಟಾಯಿಸಿದ್ದಾನೆ.
ಅಲ್ಲದೆ ಮತ್ತೆ ಹಣಕ್ಕಾಗಿ ಪೀಡಿಸಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆನಡೆಸಿದ್ದು, ಅಲ್ಲದೆ 3 ಬಾರಿ ತಲಾಖ್ ಹೇಳಿ ಮನೆಯಿಂದ ಹೊರದಬ್ಬಿದ್ದಾನೆ. ಇದೀಗ ಗಾಯಗೊಂಡಿರುವ ಶಬಾನಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯ ಅನ್ಯಾಯದಿಂದ ಪತ್ನಿ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.