DAKSHINA KANNADA
ಮಂಗಳೂರು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆ, ಜೈಲು ಅಧಿಕ್ಷಕ ಅಮಾನತು..!
ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ಕಮಿಷನರ್ ನೇತೃತ್ವದ ಪೊಲೀಸರು ದಾಳಿ ನಡೆಸಿದ ಸಂದರ್ಭ ಮಾದಕ ದ್ರವ್ಯಗಳು, ಮೊಬೈಲ್‌ಗಳ ಸಹಿತ ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿದ ಜೈಲು ಅಧೀಕ್ಷಕ ಬಿ.ಟಿ.ಓಬಳೇಶಪ್ಪ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಮುಂದಿನ ಆದೇಶದ ತನಕ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮೈಸೂರು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಕೆ.ಎನ್. ಮೋಹನ್ ಕುಮಾರ್ ಅವರನ್ನು ಮಂಗಳೂರು ಕಾರಾಗೃಹದ ಅಧೀ ಕ್ಷಕರ ಪ್ರಭಾರ ವಹಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕ ದೇವಜ್ಯೋತಿ ರೇ ತಿಳಿಸಿದ್ದಾರೆ.
ಜು.25ರಂದು ಮುಂಜಾನೆ 4 ಗಂಟೆಗೆ, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15. ಇನ್ ಸ್ಪೆಕ್ಟರ್‌ಗಳು ಸೇರಿದಂತೆ 150 ಪೊಲೀಸರ ಪಡೆ ಜೈಲಿಗೆ ದಾಳಿ ನಡೆಸಿದ್ದು, ಈ ಸಂದರ್ಭ ಗಾಂಜಾ ಸಹಿತ ಹಲವಾರು ಪ್ಯಾಕೆಟ್ ಮಾದಕ ವಸ್ತುಗಳು, 25 ಮೊಬೈಲ್ ಫೋನ್, ಬ್ಲೂಟೂಥ್, ಐದು ಇಯರ್ ಫೋ ನ್, ಪೆನ್ ಡೈವ್, ಎರಡು ಚಾರ್ಜರ್ ಗಳು, ಕತ್ತರಿಗಳು, ಮೂರು ಕೇಬಲ್ ವಶಪಡಿಸಲಾಗಿತ್ತು. ಈ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.