LATEST NEWS
ವಿಚಾರವಾದಿ ಪ್ರೋ. ನರೇಂದ್ರ ನಾಯಕ್ ಸೇರಿದಂತೆ ನಾಲ್ವರಿಗೆ ಒದಗಿಸಿದ್ದ ಭದ್ರತೆ ಹಿಂಪಡೆದ ಪೊಲೀಸ್ ಇಲಾಖೆ
ಮಂಗಳೂರು ಮಾರ್ಚ್ 31: ಜೀವ ಬೆದರಿಕೆ ಎದುರಿಸುತ್ತಿದ್ದ ಹಿನ್ನಲೆ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಸೇರಿದಂತೆ ನಾಲ್ವರಿಗೆ ಒದಗಿಸಿದ್ದ ಪೊಲೀಸ್ ಭದ್ರತೆ ಯನ್ನು ಪೊಲೀಸರು ಹಿಂಪಡೆದುಕೊಂಡಿದ್ದಾರೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೆದರಿಕೆ ಎದುರಿಸುತ್ತಿದ್ದ ಐವರಿಗೆ ಪೊಲೀಸ್ ಸಿಬ್ಬಂದಿಯನ್ನು ಅಂಗರಕ್ಷಕರನ್ನಾಗಿ ಒದಗಿಸಲಾಗಿತ್ತು. ಇವರಲ್ಲಿ ಒಬ್ಬರು ಅಂಗರಕ್ಷಕ ಸಿಬ್ಬಂದಿ ಬೇಡ ಎಂದು ತಿಳಿಸಿದ್ದರು. ಉಳಿದ ನಾಲ್ವರಿಗೆ ಇರುವ ಬೆದರಿಕೆಗೆ ಸಂಬಂಧಿಸಿ ಈಚೆಗೆ ಪರಾಮರ್ಶೆ ನಡೆಸಲಾಗಿದ್ದು, ಅವರಿಗೆ ಒದಗಿಸಿದ್ದ ಅಂಗರಕ್ಷಕನ್ನು ಸದ್ಯಕ್ಕೆ ಹಿಂಪಡೆಯಲು ತೀರ್ಮಾನಿಸಲಾಗಿದೆ’ ಎಂದು ಡಿಸಿಪಿ ಅಂಶುಕುಮಾರ್ ತಿಳಿಸಿದ್ದಾರೆ.
ಇನ್ನು ನರೇಂದ್ರ ನಾಯಕರ್ ಅವರ ಅಂಗರಕ್ಷಕನನ್ನು ಹಿಂದಕ್ಕೆ ಕರೆಸಿಕೊಂಡಿದ್ದಕ್ಕೆ ಡಿವೈಎಫ್‌ಐ ಖಂಡನೆ ವ್ಯಕ್ತಪಡಿಸಿದೆ. ‘ವೈಜ್ಞಾನಿಕ ಮನೋಭಾವನೆ ಬೆಳೆಸಲು ಶ್ರಮಿಸುತ್ತಿದ್ದ ಪ್ರೊ.ನರೇಂದ್ರ ನಾಯಕ್ ಬಲಪಂಥೀಯರಿಂದ ಬೆದರಿಕೆ ಎದುರಿಸುತ್ತಿದ್ದರು. ಅವರ ಜೀವಕ್ಕೆ ತೊಂದರೆಯಾದರೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆ’ ಎಂದು ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.