DAKSHINA KANNADA
ಉಡುಪಿ ಜಿಲ್ಲಾ ಬಿಜೆಪಿಯಲ್ಲಿ ಅಸಮಧಾನ ಸ್ಪೋಟ,ರಾಜ್ಯಾಧ್ಯಕ್ಷ ನಳಿನ್ ಅಭಿನಂದನಾ ಕಾರ್ಯಕ್ರಮಕ್ಕೆ ಗೈರಾದ ಶಾಸಕರು

ಉಡುಪಿ ಜಿಲ್ಲಾ ಬಿಜೆಪಿಯಲ್ಲಿ ಅಸಮಧಾನ ಸ್ಪೋಟ,ರಾಜ್ಯಾಧ್ಯಕ್ಷ ನಳಿನ್ ಅಭಿನಂದನಾ ಕಾರ್ಯಕ್ರಮಕ್ಕೆ ಗೈರಾದ ಶಾಸಕರು
ಉಡುಪಿ ಸೆಪ್ಟೆಂಬರ್ 10: ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ್ದ ನಳಿನ್ ಕುಮಾರ್ ಗೆ ಉಡುಪಿ ಬಿಜೆಪಿಯ ಅಸಮಧಾನದ ಸ್ವಾಗತ ದೊರೆತಿದೆ.
ಸಂಸದ ನಳಿನ್ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ನಂತರ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ್ದಾರೆ. ಉಡುಪಿಯಲ್ಲಿ ಇಂದು ಜಿಲ್ಲಾ ಬಿಜೆಪಿ ವತಿಯಿಂದ ನಳಿನ್ ಕುಮಾರ್ ಗೆ ಅಭಿನಂದನಾ ಸಭೆಯನ್ನು ಏರ್ಪಡಿಸಲಾಗಿತ್ತು. ಆದರೆ ಈ ಅಭಿನಂದನಾ ಸಭೆಗೆ ಬಿಜೆಪಿಯ ಇಬ್ಬರು ಶಾಸಕರು ಗೈರು ಹಾಜರಾಗುವ ಮೂಲಕ ತಮ್ಮ ಅಸಮಧಾನವನ್ನು ತೋರಿಸಿದ್ದಾರೆ.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಗೈರಾಗಿರುವ ಶಾಸಕರು. ಮಂತ್ರಿಪಟ್ಟದ ಆಸೆಯಲ್ಲಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಮತ್ತೆ ನಿರಾಸೆಯಾಗಿರುವುದರಿಂದ ಅಸಮಧಾನದಲ್ಲಿದ್ದು, ಇಂದು ನಡೆದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿಲ್ಲ. ಆದರೆ ಜಿಲ್ಲೆಯ ನಾಯಕರು ಹಾಲಾಡಿ ಅವರಿಗೆ ಖುರ್ಚಿ ಇಟ್ಟು ಕಾಯುತ್ತಿರುವ ದೃಶ್ಯ ಕಂಡು ಬಂದಿತ್ತು.
ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಗೈರಾಗಿದ್ದು, ಆದರೆ ಸುಕುಮಾರ ಶೆಟ್ಟಿಗೆ ಜಿಲ್ಲಾ ಬಿಜೆಪಿಯೇ ಕುರ್ಚಿ ಇಡಲಿಲ್ಲ. ಇಬ್ಬರು ಶಾಸಕರು ಅಸಮಧಾನಗೊಂಡಿರುವ ಮೂಲದ ಉಡುಪಿ ಜಿಲ್ಲೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಭಿತಾಗಿದೆ.
ಬಿಜೆಪಿ ಭದ್ರಕೊಟೆ ಉಡುಪಿಯಲ್ಲೇ ಬಿಜೆಪಿಯಲ್ಲಿ ಅಸಮಧಾನ ಸ್ಪೋಟವಾಗಿರುವ ನೂತನ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಗೆ ಸವಾಲಾಗಿ ಪರಿಣಮಿಸಿದೆ.