LATEST NEWS
ಗುಜರಾತ್ – ಖಾಸಗಿ ವಿಮಾನ ಸಂಸ್ಥೆಯ ತರಭೇತಿ ವಿಮಾನ ಪತನ – ಓರ್ವ ಟ್ರೈನಿ ಪೈಲಟ್ ಸಾವು

ಗುಜರಾತ್ ಎಪ್ರಿಲ್ 22: ವಿಮಾನ ಪೈಲೆಟ್ ತರಭೇತಿ ನೀಡುವ ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವೊಂದು ಜನ ವಸತಿ ಪ್ರದೇಶದಲ್ಲಿ ಪತನಗೊಂಡ ಪರಿಣಾಮ ಓರ್ವ ಟ್ರೈನಿ ಪೈಲೆಟ್ ಸಾವನಪ್ಪಿದ ಘಟನೆ ಗುಜರಾತ್ ನ ಅಮ್ರೇಲಿಯಲ್ಲಿ ನಡೆದಿದೆ
ಮಂಗಳವಾರ ಮಧ್ಯಾಹ್ನ 12:30 ರ ಸುಮಾರಿಗೆ ಅಮ್ರೇಲಿ ಪಟ್ಟಣದ ಗಿರಿಯಾ ರಸ್ತೆಯ ವಸತಿ ಪ್ರದೇಶದಲ್ಲಿನ ಮರವೊಂದರ ಮೇಲೆ ಬಿದ್ದ ವಿಮಾನ ತದನಂತರ ನೆಲಕ್ಕೆ ಬಿದ್ದು ಪತನಗೊಡಿದೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ವಿಮಾನ ಅಮ್ರೇಲಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಶಾಸ್ತ್ರಿನಗರದ ಬಳಿ ಬಳಿ ಪತನಗೊಂಡ ನಂತರ ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ. ಪರಿಣಾಮ ಟ್ರೈನಿ ಪೈಲಟ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ವಿಮಾನ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.