LATEST NEWS
ಎಪ್ರಿಲ್ 16 ರಿಂದ ಖಾಸಗಿ ಬಸ್ ದರ ಹೆಚ್ಚಳ

ಎಪ್ರಿಲ್ 16 ರಿಂದ ಖಾಸಗಿ ಬಸ್ ದರ ಹೆಚ್ಚಳ
ಉಡುಪಿ ಎಪ್ರಿಲ್ 13: ಎಪ್ರಿಲ್ 16 ರಿಂದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಖಾಸಗಿ ಬಸ್ ಪ್ರಯಾಣ ಹೆಚ್ಚಳವಾಗಲಿದೆ. ದಕ್ಷಿಣಕನ್ನಡ ಮತ್ತು ಉಡುಪಿಯ ಎರಡೂ ಜಿಲ್ಲೆಗಳ ಖಾಸಗಿ ಬಸ್ ದರ 1 ರಿಂದ 3 ರೂಪಾಯಿಗಳಷ್ಟು ಹೆಚ್ಚಳವಾಗಲಿದೆ.
ಎಕ್ಸ್ ಪ್ರೆಸ್ ಬಸ್ ದರ ಕುಂದಾಪುರದಿಂದ ಉಡುಪಿಗೆ 2 ರೂಪಾಯಿ ಹೆಚ್ಚಳವಾಗಲಿದ್ದು, ಉಡುಪಿಯಿಂದ ಮಂಗಳೂರಿಗೆ 3 ರೂಪಾಯಿ ಹೆಚ್ಚಿಸಲಾಗಿದೆ. ಉಳಿದ ಎಲ್ಲ ಸ್ಟೇಜ್ ಗಳಿಗೆ 1 ಅಥವಾ 2 ರೂಪಾಯಿಯನ್ನು ಹೆಚ್ಚಿಸಲಾಗಿದೆ.

ಡಿಸೇಲ್ ಬೆಲೆ ಹೆಚ್ಚಾದಾಗ ಪ್ರತಿ ಕಿಲೋಮೀಟರ್ ಗೆ 4 ಪೈಸೆಯಷ್ಟು ಸರ್ಚಾರ್ಜ್ ಹೆಚ್ಚಿಸಲು ಸರಕಾರದ ನೋಟಿಫಿಕೇಷನ್ ನಲ್ಲಿ ಅವಕಾಶವಿದೆ ಎಂದು ಕೆನರಾ ಬಸ್ ಮಾಲಕರ ಸಂಘ ತಿಳಿಸಿದೆ.
ಸರ್ವಿಸ್ ಬಸ್ ಗಳಲ್ಲಿಯೂ 20 ರೂಪಾಯಿಗಳ ಸರ್ಚಾರ್ಜ್ 1 ರೂಪಾಯಿ, 20 ರೂಪಾಯಿಗಳಿಗಿಂತ ಹೆಚ್ಚು ಇದ್ದರೆ 2 ರೂಪಾಯಿ ವರೆಗೆ ಸರ್ಚಾರ್ಜ್ ಹೆಚ್ಚಿಸಲಾಗಿದೆ.
ದೇಶದಲ್ಲಿ ಇತ್ತೀಚೆಗೆ 66 ರೂಪಾಯಿ ಏರಿಕೆಯಾಗಿದ್ದು ಕಳೆದ ಒಂದು ವಾರದಲ್ಲಿ ಹಲವು ಬಾರಿ ಡಿಸೆಲ್ ದರ ಏರಿಕೆಯಾಗಿದ್ದು, ಬಸ್ ದರ ಏರಿಕೆ ಅನಿವಾರ್ಯ ಎಂದು ಬಸ್ ಮಾಲಕರ ಸಂಘ ತಿಳಿಸಿದೆ.