LATEST NEWS
ನಡು ರಸ್ತೆಯಲ್ಲೇ ಖಾಸಗಿ ಬಸ್ ಚಾಲಕರ WWF Fight…..!

ನಡು ರಸ್ತೆಯಲ್ಲೇ ಖಾಸಗಿ ಬಸ್ ಚಾಲಕರ WWF Fight…..!
ಮಂಗಳೂರು ಫೆಬ್ರವರಿ 5: ಖಾಸಗಿ ಬಸ್ಸಿನ ಚಾಲಕರಿಬ್ಬರು ನಡುಬೀದಿಯಲ್ಲಿ ಬಸ್ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ ಗಳ ಮಧ್ಯೆ ಟೈಮ್ ಕೀಪಿಂಗ್ ಹೆಸರಲ್ಲಿ ಗಲಾಟೆ ನಡೆಯುವುದು ಕಾಮನ್. ಆದರೆ, ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಎರಡೂ ಬಸ್ ಗಳ ಚಾಲಕರು ಹೊಡೆದಾಡಿದ್ದಾರೆ.
ಈ ವೇಳೆ, ಟ್ರಾಫಿಕ್ ಜಾಮ್ ಆಗಿದ್ದು ಇತರೇ ವಾಹನಗಳ ಚಾಲಕರು ದಬಾಯಿಸಿದ್ದಾರೆ. ಕಾರು ಚಾಲಕನೊಬ್ಬ ಇಬ್ಬರನ್ನೂ ಎಳೆದು ಜಗಳ ಬಿಡಿಸಿದ್ದಲ್ಲದೆ, ರಸ್ತೆಯಿಂದ ಬಸ್ ತೆಗೆಯುವಂತೆ ದಬಾಯಿಸಿದ್ದಾನೆ. ಬಳಿಕ ಇಬ್ಬರೂ ಬಸ್ ಚಾಲನೆ ಮಾಡಿದ್ದಾರೆ.

ಚಾಲಕರು ಹೊಡೆದಾಡುತ್ತಿದ್ದರೆ, ಬಸ್ ನಿರ್ವಾಹಕರು ನಿಂತು ನೋಡುತ್ತಿದ್ದರು. ಚಾಲಕರ ಹೊಡೆದಾಟವನ್ನು ಕಾರಿನಲ್ಲಿದ್ದ ಪ್ರಯಾಣಿಕರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ಡ್ರೈವರ್ ಗಳ ರಂಪಾಟ ಬೀದಿಗೆ ಬಂದಿದೆ.