FILM
ಮದುವೆ ಬಗ್ಗೆ ಆಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ಸರಿಗಮಪ ರಿಯಾಲಿಟಿ ಶೋ ಗಾಯಕಿ ಪೃಥ್ವಿ ಭಟ್

ಬೆಂಗಳೂರು, ಎಪ್ರಿಲ್ 22: ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿರುವ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ ಆಗಿದ್ದಾರೆ. ಮಾರ್ಚ್ 27ರಂದು ʻಜೀ ಕನ್ನಡʼ ವಾಹಿನಿಯಲ್ಲಿಯೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಅನ್ನುವವರ ಜೊತೆ ಪೃಥ್ವಿ ಭಟ್ ಪ್ರೇಮ ವಿವಾಹ ಆಗಿದ್ದಾರೆ. ಈ ಬಗ್ಗೆ ಪೃಥ್ವಿ ಅವರ ತಂದೆ ಶಿವಪ್ರಸಾದ್ ಅವರು ಸುಧೀರ್ಘವಾದ ಆಡಿಯೋ ರೆಕಾರ್ಡ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ಈ ಬೆನ್ನಲ್ಲೇ ಈ ಮದುವೆ ವಿವಾದಕ್ಕೆ ಪೃಥ್ವಿ ಭಟ್ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮೊದಲು ಪೃಥ್ವಿ ತಂದೆ ಶಿವಪ್ರಸಾದ್ ಭಟ್ರು, ವಿರೋಧದ ನಡುವೆಯೂ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾಳೆ. ಆಕೆಯನ್ನ ವಶೀಕರಣ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಪ್ರಥ್ವಿ ಭಟ್ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಚಲನ ಸೃಷ್ಟಿಸಿದೆ. ಆಡಿಯೋದಲ್ಲಿ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ವಿರುದ್ಧ ಕಿಡಿಕಾರಿದ್ದರು.

ಇದೀಗ ಪೃಥ್ವಿ ಭಟ್ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಹಾಯ್ ಅಪ್ಪಾ. ಸಾರಿ ನೀವು ಆಲ್ರೆಡಿ ಎರಡು ದಿನದಿಂದ ಹವ್ಯಕ ಗ್ರುಪ್ಲ್ಲಿ ಮತ್ತೆ ಬೇರೆ ಬೇರೆ ಗ್ರುಪ್ಲ್ಲಿ ನರಹರಿ ದೀಕ್ಷಿತ್ ಸರ್ ಬಗ್ಗೆ ಮತ್ತೆ ನನ್ನ ಬಗ್ಗೆ ಆಡಿಯೋ ಮೆಸೇಜ್ ಎಲ್ಲಾ ಕಳಿಸುತ್ತಿದ್ದಿ. ಈ ವಿಷಯದಲ್ಲಿ ನರಹರಿ ದೀಕ್ಷಿತ್ರದ್ದು ಏನೂ ತಪ್ಪಿಲ್ಲ. ನಾನು ಮೊದಲು ಹೇಳ್ದಂಗೆ, ಈಗಲೂ ಹೇಳ್ತಿದ್ದೀನಿ, ದೀಕ್ಷಿತ್ ಸರ್ದು ಎಂಥದ್ದು ತಪ್ಪಿಲ್ಲ.
ಮಾರ್ಚ್ 7ಕ್ಕೆ ದೀಕ್ಷಿತ್ ಸರ್ ಮನೆಗೆ ಬಂದಿದ್ದು, ಈ ವಿಷಯ ಬಗ್ಗೆ ಮಾತ್ನಾಡಿದ್ರು. ಆಗ ನಾನು ಅವರ ಎದುರೇ ಮತ್ತೆ ನಿಮ್ಮಗಳ ಎದುರೇ ನನಗೆ ಅಭಿ ಇಷ್ಟ ಅಂತನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು ಎಂದು ಹೇಳಿದ್ದಾರೆ. ಅಲ್ಲದೆ ಶೋಗಳಿಗೂ ಬೇಡ ಅಂತ ಹೇಳುತ್ತಿದ್ರಿ, ನನಗೆ ಹೆದರಿಕೆ ಶುರುವಾಯ್ತು ಹಾಗಾಗಿ ಮನೆ ಬಿಟ್ಟು ಬಂದೆ. ನಮ್ಮ ಮದುವೆಗೂ ನರಹರಿ ದೀಕ್ಷಿತ್ ಸರ್‌ಗೂ ಯಾವುದೇ ಸಂಬಂಧವಿಲ್ಲ. ಸಾಧ್ಯವಾದರೆ ನನ್ನನ್ನು ಕ್ಷಮಿಸಿ ನನ್ನಿಂದ ತಪ್ಪಾಗಿದೆ” ಎಂದು ಪೃಥ್ವಿ ಭಟ್ ಆಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Pingback: ಗಾಯಕಿ ಪೃಥ್ವಿ ಭಟ್ ಪ್ರೇಮವಿವಾಹ: ‘ಸರಿಗಮಪ’ ಜ್ಯೂರಿ ಮೇಲೆ ಆರೋಪ - themangaloremirror.in