LATEST NEWS
ಜೈಲು ಅಧೀಕ್ಷಕರ ಮೇಲೆ ಹಲ್ಲೆ ಮಾಡಿದ ಖೈದಿಗಳು

ಜೈಲು ಅಧೀಕ್ಷಕರ ಮೇಲೆ ಹಲ್ಲೆ ಮಾಡಿದ ಖೈದಿಗಳು
ಮಂಗಳೂರು ಮೇ 22: ಮಂಗಳೂರು ಸಬ್ ಜೈಲ್ ನಲ್ಲಿ ಖೈದಿಗಳು ಮಂಗಳೂರು ಜೈಲ್ ಅಧೀಕ್ಷಕರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಸಬ್ ಜೈಲ್ ಜೈಲು ಆವರಣದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಜೈಲಿನ ಕೈದಿಗಳ ಗುಂಪಿನಿಂದ ಜೈಲು ಅಧೀಕ್ಷಕರು ಸೇರಿದಂತೆ ಮೂವರು ಜೈಲು ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳು ಈ ಕೃತ್ಯ ನಡೆಸಿದ್ದು, ಬಿಂದಿಗೆಯಿಂದ ಅಧೀಕ್ಷಕ ಪರಮೇಶ್ವರ್ ಅವರ ಮೇಲೆ ನಡೆಯುತ್ತಿದ್ದ ವೇಳೆ ಹಲ್ಲೆ ತಡೆಯಲು ಬಂದ ಸಿಬ್ಬಂದಿ ರಮೇಶ್, ಹುಡಭಾಗ ಎಂಬವರ ಮೇಲೂ ಹಲ್ಲೆ ನಡೆಸಿದ್ದಾರೆ.
ಜೈಲ್ ಅಧೀಕ್ಷಕರು ಸೇರಿದಂತೆ ಮೂವರು ಸಿಬ್ಬಂದಿ ಗಳಿಗೆ ಗಾಯ . ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ .ಘಟನೆ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.