LATEST NEWS
ದೇಶದ ವಿಕಾಸಕ್ಕೆ ಹಿಂದಿನ ಪ್ರಧಾನಿಗಳು ಯಾರೂ ಪ್ರಯತ್ನಿಸಿಲ್ಲ :ಕೇಂದ್ರ ಸಚಿವ ಚೌಧರಿ ಬಿರೇಂದರ್ ಸಿಂಗ್

ದೇಶದ ವಿಕಾಸಕ್ಕೆ ಹಿಂದಿನ ಪ್ರಧಾನಿಗಳು ಯಾರೂ ಪ್ರಯತ್ನಿಸಿಲ್ಲ :ಕೇಂದ್ರ ಸಚಿವ ಚೌಧರಿ ಬಿರೇಂದರ್ ಸಿಂಗ್
ಮಂಗಳೂರು, ಜನವರಿ 08 : ದೇಶ ಬದಲಾವಣೆಯತ್ತ ಹೆಜ್ಜೆಹಾಕುತ್ತಿದೆ. ಮುಂದಿನ 20 ಲಕ್ಷ ಕೋಟಿಯಷ್ಟು ಹಣ ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ಹರಿದಾಡಿದಲ್ಲಿ ದೇಶದ ಜಿಡಿಪಿ ಎಂದಿಗೂ ಕೆಳಗಿಳಿಯಲ್ಲ ಎಂದು ಕೇಂದ್ರ ಸಚಿವ ಚೌಧರಿ ಬಿರೇಂದರ್ ಸಿಂಗ್ ಹೇಳಿದ್ದಾರೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಮತ್ತು ಅಮಿತ್ ಶಾರ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ ಆದರೆ,ದೇಶದ ವಿಕಾಸಕ್ಕೆ ಈ ಹಿಂದಿನ ಸರಕಾರದ ಪ್ರಧಾನಿಗಳು ಯಾರೂ ಪ್ರಯತ್ನ ನಡೆಸಿಲ್ಲ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಮಾತ್ರ ಅಭಿವೃದ್ಧಿ ಪೂರಕ ಕೆಲಸ ನಡೆಸುತ್ತಿದ್ದಾರೆ ಎಂದರು.

ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಬ್ಯಾಂಕ್ ಹೊಂದಿರಬೇಕೆಂಬ ನಿಟ್ಟಿನಲ್ಲಿ ಜನಧನ್ ಯೋಜನೆ ತಂದರು ಈ ಹಿನ್ನೆಲೆಯಲ್ಲಿ ಇಂದು ಬಡವರೂ ಕೂಡಾ ಬ್ಯಾಂಕ್ ಖಾತೆ ಹೊಂದಿದ್ದಾರೆ. ನೋಟು ಅಪಮೌಲ್ಯೀಕರಣ ನಡೆಸುವಾಗಲೂ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು. ಜಿಎಸ್ ಟಿ ಹಲವರಿಗೆ ಸಮಸ್ಯೆ ಎನಿಸಿರಬಹುದು ಆದರೆ, ಮುಂದಿನ ಬಜೆಟ್ ನಲ್ಲಿ ಶೇ.20ರಷ್ಟು 2019ರ ಬಜೆಟ್ ನಲ್ಲಿ ಶೇ. 60ರಷ್ಟು ಹೆಚ್ಚಳವಾಗಲಿದೆ. ಕಳೆದ ಬಾರಿ ನಮ್ಮ ದೇಶದ ಬಜೆಟ್ 21 ಲಕ್ಷ ಕೋಟಿ ಆಗಿತ್ತು. ಮುಂದಿನ 3 ವರ್ಷದಲ್ಲಿ ಪ್ರಸ್ತುತ ಬಜೆಟ್ ಗಿಂತ ದ್ವಿಗುಣವಾಗಿಲಿದೆ ಎಂದು ಅಭಿಪ್ರಾಯಪಟ್ಟರು.
ನೋಟು ಬ್ಯಾನ್ ನಿಂದಾಗಿ ಕಾಂಗ್ರೆಸ್ ಎಸ್ಸಿಎಸ್ಟಿ ಮತ ಅವರ ಕಡೆಯಿದೆ ಎಂದು ಯೋಚನೆ ಮಾಡಿದ್ದರು, ಆದರೆ ಉತ್ತರ ಪ್ರದೇಶದಲ್ಲಿ ಶೇ. 90 ರಷ್ಟು ಮತ ಎಸ್ಸಿಎಸ್ಟಿಗಳಿಂದ ಬಂದಿತ್ತು.
ಮಹಿಳೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಬಿಜೆಪಿ ಬಿಲ್ ಜಾರಿ ಮಾಡಲು ಯೋಜನೆ ಹಮ್ಮಿತ್ತು. ತಲಾಕ್ ವಿಚಾರ ಬಿಲ್ ಬರುವಾಗ ಚಾಲಾಕಿಯಿಂದ ರಾಜ್ಯಸಭೆಯಲ್ಲಿ ವಿರೊಧ ಮಾಡಲಾಗುತ್ತಿದೆ ಎಂದು ಹೇಳಿದ ಅವರು ಕಾಂಗ್ರೆಸ್ ಇನ್ನೂ ದೇಶದ ಶೇ 50 ರಷ್ಟು ಮಹಿಳೆಯರ ವಿರುದ್ಧವಾಗಿದೆ ಅವರ ಅಭಿವೃದ್ಧಿಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದ ಅವರು ಮುಂದಿನ ದಿನಗಳಲ್ಲಿ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದರು.