LATEST NEWS
ಉಡುಪಿ ಮಲ್ಲಿಗೆಯ ದರ ಗಗನಮುಖಿ….!

ಉಡುಪಿ ಅಕ್ಟೋಬರ್ 8 : ಕೊರೊನ ಸಂದರ್ಭದಲ್ಲಿ ಭಾರಿ ಇಳಿಕೆ ಕಂಡಿದ್ದ ಮಲ್ಲಿಗೆ ಇದೀಗ ಭಾರಿ ಏರಿಕೆ ಕಂಡಿದೆ. ಉಡುಪಿ ಮಲ್ಲಿಗೆಯ ದರ ದಾಖಲೆ ಏರಿಕೆ ಕಂಡಿದೆ. ಪೇಟೆಂಟ್ ಪಡೆದ ಈ ವಾಣಿಜ್ಯ ಬೆಳೆಯ ದರ ಮತ್ತೊಮ್ಮೆ ಗಗನಮುಖಿಯಾಗಿದೆ.
ಪ್ರತೀ ಅಟ್ಟೆ ಹೂವು ಅಂದರೆ ಮೂರು ಸಾವಿರ ಹೂವಿನ ಎಸೆಳಿಗೆ ಬರೋಬ್ಬರಿ 1250 ರೂ ದರ ನಿಗದಿಯಾಗಿದೆ. ಪಿತೃಪಕ್ಷದಲ್ಲಿ ಮಲ್ಲಿಗೆಯ ದರ ತುಂಬಾ ಇಳಿಮುಖವಾಗಿತ್ತು. ಸೆಪ್ಟಂಬರ್ 28ರ ವೇಳೆಗೆ ಹೂವಿನ ಅಟ್ಟೆಗೆ ಕೇವಲ 170 ರುಪಾಯಿ ಇತ್ತು.ಬಳಿಕ ಚೇತರಿಕೆ ಕಂಡು ಅಕ್ಟೋಬರ್ ಒಂದರಂದು 670 ರುಪಾಯಿ, ಮೂರರಂದು 950 ರಪಾಯಿಗೆ ಏರಿಕೆಯಾಗಿತ್ತು.

ಇದೀಗ ದಾಖಲೆಯ 1250 ರುಪಾಯಿಗೇರಿದೆ. ಮುಂದಿನ ದಿನಗಳಲ್ಲಿ ನವರಾತ್ರಿ ಸಹಿತ ಅನೇಕ ಹಬ್ಬಗಳ ಆಚರಣೆ ಇರೋದರಿಂದ, ಹೂವಿನ ದರದಲ್ಲಿ ಏರಿಕೆ ಕಂಡುಬಂದಿದೆ. ಈ ಬೆಳವಣಿಗೆ ಕೊರೋನಾದಿಂದ ಕಂಗೆಟ್ಟ ರೈತರ ಮುಖದಲ್ಲಿ ಹರ್ಷ ಮೂಡಿಸಿದೆ.