Connect with us

    DAKSHINA KANNADA

    ತುಳು ಕೂಡ ಕುಡ್ಲದ ಅಧ್ಯಕ್ಷ, ಸಾಮಾಜಿಕ ಧಾರ್ಮಿಕ ಕ್ಷೇತ್ರದ ಹಿರಿಯ ನೇತಾರ ಬಿ ದಾಮೋದರ ನಿಸರ್ಗ ವಿಧಿವಶ

    ಮಂಗಳೂರು :ತುಳುಕೂಟ ಕುಡ್ಲ ಇದರ ಅಧ್ಯಕ್ಷ, ಸಾಮಾಜಿಕ ಧಾರ್ಮಿಕ ಕ್ಷೇತ್ರದ ಹಿರಿಯ ನೇತಾರ ಬಿ ದಾಮೋದರ ನಿಸರ್ಗ(75) ಅವರು ಶನಿವಾರ ಅಪರಾಹ್ನ ನಿಧನರಾಗಿದ್ದಾರೆ.

    ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಮೋಕ್ತಸರರಾಗಿ ಕೂಡ ಅವರು ಸೇವೆ ಸಲ್ಲಿದ್ದಾರೆ. ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೋಕ್ತಸರರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ. ಕಂಕನಾಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿರುತ್ತಾರೆ, ಜೊತೆಗೆ  ಶ್ರೀ ಗೋಕರ್ನಾಥ ಬ್ಯಾಂಕಿನ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿರುತ್ತಾರೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಬೇಕೆಂದು  ಭಾರೀ ಪ್ರಯತ್ನ ಮಾಡಿದ್ದರು. ಅಖಿಲ ಭಾರತ ತುಳು ಒಕ್ಕೂಟದ ಪದಾಧಿಕಾರಿ ಆಗಿದ್ದ ದಾಮೋದರ ನಿಸರ್ಗ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಒಕ್ಕೂಟದ ನಡೆಸಿದ ತುಳು ಜನಪದ ಉತ್ಸವದಲ್ಲಿ ಭಾಗವಹಿಸಿದ್ದು ಇದು ಅವರ ಕೊನೆಯ ಕಾರ್ಯಕ್ರಮವಾಗಿತ್ತು. ಯಕ್ಷಗಾನ ರಂಗದ ಸಾಧಕರಿಗೆ ದಾಮೋದರ ನಿಸರ್ಗ ಅವರ ಪಿತೃಶ್ರೀ ಬೋಳೂರು ದೋಗ್ರ ಪೂಜಾರಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಿಕೊಂಡು ಬಂದಿದ್ದಾರೆ. ಭಾಗವತ ಪ್ರಸಂಗ ಕರ್ತ ಮಧುಕುಮಾರ್ ನಿಸರ್ಗ ಮತ್ತು ದಿ. ಸಾಹಿತಿ, ಸಿನೆಮಾ ನಿರ್ದೇಶಕ ವಿಶು ಕುಮಾರ್ ಅವರ ಸಹೋದರರಾಗಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply