Connect with us

KARNATAKA

ಸರಿಯಾದ ಚಿಕಿತ್ಸೆ ಸಿಗದೇ ಒಂದೂವರೆ ತಿಂಗಳ ಗರ್ಭಿಣಿ ಸಾವು..ಶಿವಮೊಗ್ಗದಲ್ಲಿ ನಡೆದ ಘೋರ ದುರಂತ

ಶಿವಮೊಗ್ಗ ಜನವರಿ 28: ಸರಿಯಾದ ಚಿಕಿತ್ಸೆ ಸಿಗದೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಒಂದೂವರೆ ತಿಂಗಳ ಗರ್ಭಿಣಿ ಸಾವನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತರನ್ನು ಹೊಸನಗರ ತಾಲೂಕಿನ ನಗರ ಬಳಿಯ ಮೂಡುಗುಪ್ಪದ ದುಬಾರತಟ್ಟಿ ನಿವಾಸಿ ಅಶ್ವಿನಿ (29) ಎಂದು ಗುರುತಿಸಲಾಗಿದೆ.


ಅಶ್ವಿನಿಯವರು ಮದುವೆಯಾಗಿ ಕೇವಲ ಒಂದೂವರೆ ವರ್ಷ ಆಗಿತ್ತು. ಆರೋಗ್ಯದಲ್ಲಿ ಏರುಪೇರು ಹಿನ್ನೆಲೆಯಲ್ಲಿ ಜನವರಿ 27 ಸಾಗರದ ತಾಲೂಕು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಅಸ್ವಸ್ಥಗೊಂಡ ಅಶ್ವಿನಿಗೆ ವೈದ್ಯರು ಗರ್ಭಪಾತ ಮಾಡಿಸಿದ್ದಾರೆ. ಬಳಿಕವೂ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಈ ಹಿನ್ನಲೆಯಲ್ಲಿ ಗಂಭೀರ ಸ್ಥಿತಯಲ್ಲಿದ್ದ ಅಶ್ವಿನಿಯನ್ನು ಶಿವಮೊಗ್ಗ ಆಶ್ಪತ್ರೆಗೆ ಕರೆದುಕೊಂಡು ಹೋಗಲು ಸಾಗರ ಸರ್ಕಾರಿ ವೈದ್ಯರ ಸೂಚಿಸಿದ್ದಾರೆ. ಅದರಂತೆ ಕುಟುಂಬಸ್ಥರು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಕೆಲವೇ ಕ್ಷಣದಲ್ಲಿ ಅಶ್ವಿನಿ ಕೊನೆಯುಸಿರೆಳೆದಿದ್ದಾಳೆ.


ಮಗು ಸರಿಯಾಗಿ ಬೆಳೆದಿರಲಿಲ್ಲ. ಈ ಹಿನ್ನಲೆಯಲ್ಲಿ ಆಶ್ವಿನಿಗೆ ವೈದ್ಯರು ಗರ್ಭಪಾತ ಮಾಡಿದ್ದಾರಂತೆ. ಗರ್ಭಪಾತ ಮಾಡಿದ ಬಳಿಕ ನಿರಂತರವಾಗಿ ಅಶ್ವಿನಿಗೆ ರಕ್ತಸ್ರಾವ ಆಗಿದೆ. ಹಂತ ಹಂತವಾಗಿ ಅಶ್ವಿನಿ ಆರೋಗ್ಯವು ಹದಿಗೆಡುತ್ತಾ ಹೋಗುತ್ತಿತ್ತು. ಇದನ್ನು ಗಮನಿಸಿ ವೈದ್ಯರು ತುರ್ತು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಶಿವಮೊಗ್ಗಕ್ಕೆ ಹೋಗಲು ಸೂಚಿಸಿದ್ದರು. ಸಾಗರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಟ್ಟಿದ್ದರೆ ಅಶ್ವಿನಿ ಬದುಕಬಹುದಿತ್ತು. ಆದ್ರೆ ವೈದ್ಯರು ಯಾವುದೇ ರೀಸ್ಕ್ ತೆಗೆದುಕೊಳ್ಳದೇ ಅಶ್ವಿನಿಯನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ದಾರಿಯೂದ್ದಕ್ಕೂ ವಿಲ ವಿಲ ಒದ್ದಾಡಿದ್ದ ಅಶ್ವಿನಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆ ಪ್ರಾಣ ಹೋಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಅಶ್ವಿನಿ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮುಗಿಸಿ ಚಿನ್ನದ ಪದಕ ಪಡೆದಿದ್ದ ಪ್ರತಿಭಾವಂತೆಯಾಗಿದ್ದು, ಹೊಸನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನು ನೂರಾರು ಕನಸುಗಳೊಂದಿಗೆ ಜೊತೆಗೆ ಒಂದೂವರೆ ವರ್ಷದ ಹಿಂದಷ್ಟೇ ಹೊಸನಗರದ ಅರಳಿ ಪ್ರಕಾಶ್ ಎಂಬುವರ ಜೊತೆಗೆ ಮದುವೆಯಾಗಿದ್ದ ಅಶ್ವಿನಿ ಇದೀಗ ದುರಂತ ಅಂತ್ಯ ಕಂಡಿದ್ದಾಳೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *