BELTHANGADI
‘ದಿ.ಪ್ರವೀಣ್ ನೆಟ್ಟಾರ್ ತಾಯಿಗೆ ಪ್ರಧಾನಿ ಭೇಟಿಗೆ ಅವಕಾಶ ನೀಡಿದ್ದ ದ.ಕ. ಬಿಜೆಪಿಗೆ ಸೌಜನ್ಯಳ ತಾಯಿ ನೆನಪಾಗಿಲ್ಲವೇ.’.!!?
ಬೆಳ್ತಂಗಡಿ : ಲೋಕಸಭೆ ಚುನಾವಣಾ ಪ್ರಚಾರದ ರೋಡ್ ಶೋಗೆ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಬಿಜೆಪಿ ಮುಖಂಡರೊಂದಿಗೆ ದಿ.ಪ್ರವೀಣ್ ನೆಟ್ಟಾರ್ ರವರ ತಾಯಿಗೆ ಅವಕಾಶವನ್ನು ನೀಡಿದ ವಿಚಾರ ಇದೀಗ ಹೊಸ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯ ಕಾರ್ಯಕರ್ತನ ತಾಯಿಗೆ ಪ್ರಧಾನಿಯವರನ್ನು ಭೇಟಿಯಾಗಿಸಲು ಅವಕಾಶ ದೊರೆಯುವಂತಾಗಿದ್ದದು ಒಳ್ಳೇ ವಿಚಾರವೇ ಆಗಿದೆ ಆದರೆ ಇದೇ ಸಂದರ್ಭ ಬಿಜೆಪಿ ಮುಖಂಡರಿಗೆ ಸೌಜನ್ಯ ತಾಯಿ ನೆನಪಾಗಲಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭಿಸಿದ್ದಾರೆ. ಮುಂದುವರಿದು ಹಲವು ಜನ ಈ ಮಣ್ಣಿನಲ್ಲಿ ಹಿಂದುತ್ವದ ಹೆಸರಿನಲ್ಲಿ ಸಾವನ್ನೊಪ್ಪಿದ್ದಾರೆ. ಶರತ್ ಮಡಿವಾಳ ಎಂಬ ಯುವಕನ ಸಾವಿಗೆ ಬೆಲೆ ಇಲ್ವಾ? ಇಂತಹ ನಾಟಕ ಈ ತುಳುವ ಮಣ್ಣಿನಲ್ಲಿ ಅಗತ್ಯವಿಲ್ಲ ಎಂಬಿತ್ಯಾದಿ ಕಾಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಳ್ತಂಗಡಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸುತ್ತಿರುವ ಸೌಜನ್ಯ ತಾಯಿ ಕುಸುಮಾವತಿ ಅವರು, ಪ್ರಧಾನಮಂತ್ರಿ ಮೋದಿಯವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆಕಟೀಲ್ ಅವರನ್ನು ಒತ್ತಾಯಿಸಿದ್ದರು. ಬಳಿಕ ದೆಹಲಿ ಚಲೋ’ ಪ್ರತಿಭಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಜನಾಂದೋಲನದಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಆ ಬಳಿಕ ನಮ್ಮ ನೆರವಿಗೆ ಯಾರು ಬಂದಿಲ್ಲ. ಪ್ರಧಾನಿ ಅವರನ್ನು ಭೇಟಿ ಮಾಡಬೇಕು ಎಂಬ ಉದ್ದೇಶದಿಂದ ದೆಹಲಿಗೆ ಬಂದಿದ್ದೇವೆ’ ಮೋದಿ ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿ ಸಂಸದರು ಮತ್ತು ಶಾಸಕ ಹರೀಶ್ ಪೂಂಜಾ ಮಾತುಕೊಟ್ಟು ಮರೆತು ಬಿಟ್ಟಿದ್ದಾರೆ ಎಂದು ಸೌಜನ್ಯ ತಾಯಿ ಕುಸುಮಾವತಿ ಆಕ್ರೋಶ ವ್ಯಕ್ತಪಡಿಸಿದ್ದರು.