DAKSHINA KANNADA
ಪ್ರವೀಣ್ ನೆಟ್ಟಾರ್ ತಂದೆ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

ಬೆಳ್ಳಾರೆ, ಜುಲೈ 28: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರ್ ಹತ್ಯೆಯಿಂದ ಆಘಾತಕ್ಕೊಳಗಾಗಿರುವ ತಂದೆಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗನ ಸಾವಿನಿಂದ ಶೇಖರ್ ಪೂಜಾರಿ ತೀವ್ರ ಆಘಾತಕ್ಕೊಳಗಾಗಿದ್ದರು. ಮೊದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ತಂದೆ ಶೇಖರ್ ಪೂಜಾರಿ ಅವರು ಇದ್ದ ಒಬ್ಬ ಮಗನ ಸಾವಿನಿಂದ ಕಂಗಾಲಾಗಿದ್ದರು.

ಇದೀಗ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಂಬುಲೆನ್ಸ್ ಮೂಲಕ ಬೆಳ್ಳಾರೆಯ ಭಾರದ್ವಾಜ್ ಆಸ್ಪತ್ರೆಗೆ ಶೇಖರ್ ಅವರನ್ನು ರವಾನೆ ಮಾಡಲಾಗಿದೆ.