DAKSHINA KANNADA
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಆರೋಪಿಗಳಿಗೆ ಆಗಸ್ಟ್ 24 ರವರೆಗೆ ನ್ಯಾಯಾಂಗ ಬಂಧನ

ಸುಳ್ಯ, ಆಗಸ್ಟ್ 16: ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಹಂತಕರ ಪೊಲೀಸ್ ಕಸ್ಟಡಿ ಅವದಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಸುಳ್ಯ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದಾರೆ.
ಆರೋಪಿಗಳಾದ ಸುಳ್ಯದ ಶಿಹಾಬುದ್ದೀನ್, ರಿಯಾಝ್ ಅಂಕತಡ್ಕ, ಬಶೀರ್ ಎಲಿಮಲೆಗೆ ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಸುಳ್ಯ ಕೋರ್ಟ್ ಆರೋಪಿಗಳನ್ನು ಆಗಸ್ಟ್ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ,

ಆರೋಪಿಗಳನ್ನು ವಶಕ್ಕೆ ಪಡೆಯುವುದಕ್ಕೆ ಎನ್.ಐ.ಎ ಅಧಿಕಾರಿಗಳಿಂದಲೂ ಸಿದ್ದತೆ ನಡೆಸಿದ್ದು, ಕೋರ್ಟ್ ಗೆ ಅರ್ಜಿ ಸಲ್ಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.