DAKSHINA KANNADA
ಪ್ರವೀಣ್ ಹತ್ಯೆ ಪ್ರಕರಣ – ಮೂರನೇ ಆರೋಪಿ ಪೊಲೀಸ್ ವಶಕ್ಕೆ…?

ಮಂಗಳೂರು ಜುಲೈ 29: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರನೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಆರೋಪಿಯನ್ನು ಸದ್ದಾಂ ಹುಸೇನ್ ಎಂದು ಗುರುತಿಸಲಾಗಿದೆ. ಪ್ರವೀಣ್ ಹತ್ಯೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದೀಗ ಮೂರನೇ ಆರೋಪಿ ಚಿಕನ್ ಸೆಂಟರ್ ಹೊಂದಿದ್ದ ಸದ್ದಾಂ ನನ್ನು ವಶಕ್ಕೆ ಪಡೆದಿದ್ದಾರೆ.

ಪ್ರವೀಣ್ ಅವರ ನೈಜ ಹಂತಕರು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಶೋಧ ಮುಂದುವರಿದಿದೆ. ಹತ್ಯೆಗೆ ಸಂಬಂಧಿಸಿ 27 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹಂತಕರು ಕೇರಳದವರು ಎಂಬ ಅನುಮಾನ ಇದ್ದು, ಅವರಿಗೆ ಮಾಹಿತಿದಾರ ರಾಗಿ ಸ್ಥಳೀಯರು ಸಹಕರಿಸಿದ್ದರೇ ಅಥವಾ ಕೃತ್ಯದಲ್ಲಿ ಸ್ಥಳೀಯರು ನೇರವಾಗಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.ಚಿಕನ್ ಸೆಂಟರ್ ಹೊಂದಿದ್ದ ಸದ್ದಾಂ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿಯಿದೆ. ಆದರೆ ಇದನ್ನು ಪೋಲಿಸರು ಇನ್ನೂ ಖಚಿತಪಡಿಸಿಲ್ಲ.