LATEST NEWS
ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರಿಗೆ ಬೆದರಿಕೆ ಕರೆ ಮಾಡಿದ್ದ ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು ಜುಲೈ 17: ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿಯಾಗಿರುವ ಶ್ರಿನಿವಾಸ ಗೌಡ ಅವರಿಗೆ ಪೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಬಂಗೇರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೋನ್ ಮೂಲಕ ಶ್ರೀನಿವಾಸ ಗೌಡ ಅವರಿಗೆ ಪ್ರಶಾಂತ ಬಂಗೇರ ಅವಾಚ್ಯಶಬ್ದಗಳಿಂದಿ ನಿಂದಿಸಿದ್ದಲ್ಲದೇ ಬೆದರಿಕೆ ಕೂಡ ಹಾಕಿದ್ದ, ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಸಕ ಉಮಾನಾಥ ಕೊಟ್ಯಾನ್ ಆರೋಪಿ ವಿರುದ್ದ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದರು ಅಲ್ಲದೆ ಕಂಬಳ ಕೋಣಗಳ ಯಜಮಾನರು ಹಾಗೂ ಶ್ರೀನಿವಾಸ ಗೌಡ ಅವರ ಅಭಿಮಾನಿಗಳು ಮೂಡುಬಿದಿರೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದು, ಈ ಹಿನ್ನಲೆ ಆರೋಪಿ ಬೆನ್ನತ್ತಿದ್ದ ಪೊಲೀಸರು ತೀರ್ಥಹಳ್ಳಿಯಲ್ಲಿ ಪ್ರಶಾಂತ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗುರುವಾರ ಕಂಬಳದ ಕುರಿತು ಪ್ರಶಾಂತ್ ಎಂಬಾತನ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ಆತ ತನ್ನನ್ನು, ತನ್ನ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಶ್ರೀನಿವಾಸ ಗೌಡ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಂದೆಡೆ ಕಂಬಳ ಕ್ಷೇತ್ರದ ಸಾಧಕನನ್ನು ಅವಹೇಳನ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಂಬಳಾಭಿಮಾನಿಗಳು ಕೃತ್ಯವನ್ನು ಖಂಡಿಸಿದ್ದಾರೆ.