LATEST NEWS
ಬಿಜೆಪಿಯ ಒಳಗೆ ಆಗುವ ತಪ್ಪುಗಳನ್ನು ಯಾರಾದರೂ ಒಬ್ಬರು ಹೇಳಲೇಬೇಕು – ಪ್ರಮೋದ್ ಮುತಾಲಿಕ್

ಉಡುಪಿ ಅಕ್ಟೋಬರ್ 05: ದೇಶದಲ್ಲಿ ಆರ್ಥಿಕ ಅಸಮಾನತೆ ಆರ್ ಎಸ್ ಎಸ್ ನ ಮುಖಂಡ ಹೊಸಬಾಳೆ ಹೇಳಿಕೆಗೆ ಪ್ರಮೋದ್ ಮುತಾಲಿಕ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯ ಒಳಗೆ ಆಗುವ ತಪ್ಪುಗಳನ್ನು ಯಾರಾದರೂ ಒಬ್ಬರು ಹೇಳಲೇಬೇಕಾಗಿದೆ ಎಂದಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ದತ್ತಾತ್ರೇಯ ಹೊಸಬಾಳೆ ಆರ್‌ಎಸ್‌ಎಸ್ 2ನೇ ಸ್ಥಾನ ಹೊಂದಿರುವ ವ್ಯಕ್ತಿ. ಅಧ್ಯಯನ ಮಾಡಿಯೇ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಹೇಳಿದ್ದಾರೆ. ಯಾವುದೇ ಟೀಕೆ, ದ್ವೇಷ ಮಾಡಲು ಅವರು ರಾಜಕೀಯ ವ್ಯಕ್ತಿಯಲ್ಲ, ದೇಶದ ಬಗ್ಗೆ ಕಳಕಳಿ ಮತ್ತು ವೇದನೆಯಿಂದ ಹೇಳಿದ್ದಾರೆ

ಸಿಟ್ಟು ಮತ್ತು ತಪ್ಪು ಸಂದೇಶ ನೀಡುವ ಉದ್ದೇಶ ಹೊಸಬಾಳೆಗೆ ಇರುವುದಿಲ್ಲ, ಬಿಜೆಪಿ ವಿರುದ್ಧ ಮಾತನಾಡಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಬಿಜೆಪಿಯ ಒಳಗೆ ಆಗುವ ತಪ್ಪುಗಳನ್ನು ಯಾರಾದರೂ ಒಬ್ಬರು ಹೇಳಲೇಬೇಕು. ನಡೆದದ್ದೇ ದಾರಿ ಎಂದು ಬಿಜೆಪಿ ಭಾವಿಸುವ ಅಪಾಯವಿದೆ. ಆರ್ಥಿಕ ಅಸಮಾನತೆ ವಿಚಾರದಲ್ಲಿ ನಾನು ಹೆಚ್ಚು ಅಧ್ಯಯನ ಮಾಡಿಲ್ಲ, ಹೊಸಬಾಳೆ ಹೇಳಿಕೆಯನ್ನು ಸ್ವೀಕರಿಸಿ ಸುಧಾರಣೆ ಹಾದಿಯಲ್ಲಿ ಬಿಜೆಪಿ ಬೆಳೆಯಬೇಕು ಎಂದರು.