LATEST NEWS
ಕರಾವಳಿ ಶಾಸಕರಿಗೆ ಸಾಮಾನ್ಯ ಪರಿಜ್ಞಾನವಿಲ್ಲ – ಪ್ರಮೋದ್ ಮಧ್ವರಾಜ್

ಕರಾವಳಿ ಶಾಸಕರಿಗೆ ಸಾಮಾನ್ಯ ಪರಿಜ್ಞಾನವಿಲ್ಲ – ಪ್ರಮೋದ್ ಮಧ್ವರಾಜ್
ಉಡುಪಿ ಜುಲೈ 6: ಸಮ್ಮಿಶ್ರ ಸರಕಾರದ ಬಜೆಟ್ ಕುರಿತು ಅಸಮಧಾನ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕರ ವಿರುದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಾಗ್ದಾಳಿ ನಡೆಸಿದ್ದಾರೆ.
ಕರಾವಳಿ ಶಾಸಕರಿಗೆ ಸಾಮಾನ್ಯ ಪರಿಜ್ಞಾನವಿಲ್ಲ. ಬಜೆಟ್ ಪುಸ್ತಕ ಪ್ರಿಂಟ್ ಹೋಗುವ ವೇಳೆ ಬೇಡಿಕೆ ಪಟ್ಟಿ ತೆಗೆದುಕೊಂಡು ಹೋಗುತ್ತಾರೆ. ಇದು ಬಿಜೆಪಿ ಶಾಸಕರ ಅಸಡ್ಡೆ ಎದ್ದು ಕಾಣುತ್ತದೆ. ಪ್ರಚಾರಕ್ಕಾಗಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ಏನು ಕೊಡುಗೆ ನೀಡಿದೆ? ಉಡುಪಿ ಜಿಲ್ಲೆಗೆ ಮೊದಿ ದೊಡ್ಡ ಕೊಡುಗೆ ಏನು ನೀಡಿಲ್ಲ. ಹೀಗಾಗಿ ಕರಾವಳಿ ಶಾಸಕರಿಗೆ ರಾಜ್ಯದ ಬಜೆಟ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಅನ್ನಭಾಗ್ಯದಲ್ಲಿ ಕಡಿಮೆ ಅಕ್ಕಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಜನರು 7 ಕೆಜಿ ತೂಕವನ್ನು ಹೊತ್ತುಕೊಂಡು ಹೋಗಲು ಸಮಸ್ಯೆ ಎದುರಿಸುವ ಕುರಿತು ವರದಿಯಾದ ಕಾರಣ ಸರ್ಕಾರ ಬಜೆಟ್ ನಲ್ಲಿ 5 ಕೆಜಿ ಅಕ್ಕಿ ಮಾತ್ರ ನೀಡಲು ಮುಂದಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ಹಿಂದೂ ಪರ ಇದ್ದು, ಬ್ರಾಹ್ಮಣ ಅಭಿವೃದ್ದಿ ಮಂಡಳಿ ರಚಿಸಿ 25 ಕೋಟಿ ರೂ ನೀಡಿದ್ದಾರೆ. ಹಿಂದುಳಿದ ಮಠಗಳಿಗೂ ವಿಶೇಷ ಅನುದಾನ ನೀಡಲಾಗಿದೆ. ಅಲ್ಲದೇ ಕೆಲ ಹಿಂದುಗಳಿದ ಮಠಗಳಿಗೂ ಅನುದಾನ ನೀಡಿದ್ದಾರೆ. ಅವರ ಕಾರ್ಯ ಮೆಚ್ಚುವಂತಹದ್ದು ಎಂದು ತಿಳಿಸಿದರು.