Connect with us

    DAKSHINA KANNADA

    ರಾಜ್ ಕುಮಾರ್ ಅವರನ್ನೇ ಮೀರಿಸುವ ನಟ – ವಂದೇಭಾರತ್‌ ರೈಲುಗಳಿಗೆ ಅವನು ತೋರಿಸಿದಷ್ಟು ಬಾವುಟಗಳನ್ನು ಯಾವ ಸ್ಟೇಷನ್ ಮಾಸ್ಟರ್‌ ಕೂಡಾ ತೋರಿಸಿರಲಿಕ್ಕಿಲ್ಲ

    ಮಂಗಳೂರು ಫೆಬ್ರವರಿ 28: ಕ್ಯಾಮೆರಾ ಡಿಪಾರ್ಟ್‌ಮೆಂಟ್‌ನೊಂದಿಗೆ ಜನರ ತೆರಿಗೆ ಹಣ ಖರ್ಚು ಮಾಡಿಕೊಂಡು ಸುತ್ತಾಡುವುದೇ ಮೋದಿ ಜಾಯ ಮಾನ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ. ತೊಕ್ಕೊಟ್ಟು ಕಲ್ಲಾಪು ಯುನಿಟಿ ಸಭಾಂಗಣದ ಬಳಿ ಡಿವೈಎಫ್ ನೇತೃತ್ವದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ 12ನೇ ರಾಜ್ಯ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿ ಪ್ರಧಾನಿ ವಿರುದ್ಧ ತೀವ್ರ ಕಿಡಿಕಾರಿದರು.


    ರಾಜ್‌ಕುಮಾರ್, ಎಂಜಿಆರ್‌, ಎನ್‌ಟಿಆರ್‌ ಅವರಿಗಿಂತಲೂ ದೊಡ್ಡ ನಟ ರಾಜಕಾರಣದಲ್ಲಿದ್ದಾನೆ. ದಿನಕ್ಕೆ ಐದು ಸಲ ಬಟ್ಟೆ ಬದಲಾಯಿಸುತ್ತಾನೆ. ವಂದೇಭಾರತ್‌ ರೈಲುಗಳಿಗೆ ಅವನು ತೋರಿಸಿದಷ್ಟು ಬಾವುಟಗಳನ್ನು ಯಾವ ಸ್ಟೇಷನ್ ಮಾಸ್ಟರ್‌ ಕೂಡಾ ತೋರಿಸಿರಲಿಕ್ಕಿಲ್ಲ’ ಎಂದರು. ಈಗ ಮಂದಿರ ಆಯಿತು. ನಾಳೆ ಜೈ ಶ್ರೀರಾಮ್ ಎಂದು ಶುರು ಮಾಡುತ್ತಾರೆ. ಈ ಸಲ ಮತ್ತೆ ಗೆದ್ದರೆ ಇನ್ನೇನು ನೋಡಬೇಕೋ. ಇವರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಆ ಬಳಿಕ ಬ್ರಾಹ್ಮಣ, ಕ್ಷತ್ರಿಯ ಎಂದು ಮತ್ತೆ ಶುರು ಮಾಡುತ್ತಾರೆ. ಇವರಿಗೆ ಬೇಕಾಗಿರುವುದೂ ಅದೇ. ಮಕ್ಕಳ ವಿದ್ಯಾಬ್ಯಾಸದಲ್ಲಿ ಇವರಿಗೆ ಆಸಕ್ತಿ ಇಲ್ಲ. ಸುಳ್ಳು ಪದವಿ ಹಿಡಿದು ಓಡಾಡುವವನಿಗೆ ವಿದ್ಯೆಯ ಮಹತ್ವ, ಬಡವರ ಹಸಿವಿನ ಮಹತ್ವ ಹೇಗೆ ತಿಳಿಯಬೇಕು. ಅಣಬೆ ತಿನ್ನುವುದು, ದಿನಕ್ಕೈದು ಸಲ ಬಟ್ಟೆ ಬದಲಾಯಿಸುವುದು, ಪ್ರಪಂಚ ಸುತ್ತುವುದು ನಮ್ಮ ತೆರಿಗೆ ದುಡ್ಡಿನಲ್ಲಿ ತಾನೆ’ ಎಂದು ಪ್ರಶ್ನಿಸಿದರು.


    ಹಿಂದೆ ಸ್ವಾತಂತ್ರ್ಯ ತಂದು ಕೊಡಲು ಉಪವಾಸ ಆಚರಿಸುವ ನಾಯಕರಿದ್ದರು. ಈಗ ಇರುವುದು ದೇವಸ್ಥಾನದ ಉದ್ಘಾಟನೆಗಾಗಿ ಉಪವಾಸ ಮಾಡುವ ನಾಯಕ. ಹಾಗಾಗಿ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವವನ್ನು ನಮ್ಮ ಕನಸನ್ನು ಸಾರ್ಥಕಗೊಳಿಸುವ ದಾರಿಯನ್ನು ನಾವು ಮತ್ತೆ ನೋಡಿಕೊಳ್ಳಬೇಕಿದೆ’ ಎಂದು ತಿಳಿಸಿದರು.

    ದೇಶವನ್ನು ಆಳುವಾತ 2019ರಲ್ಲಿ ಗುಹೆ ಸೇರಿಕೊಂಡರು, 2024ರಲ್ಲಿ ನೀರಿನಡಿ ಹೋಗಿ ಬಿಟ್ಟರು, ಮುಂದಿನ ಚುನಾವಣೆ ನಂತರ ಚಂದಿರನ ಮೇಲೆ ನಿಂತು ಪೋಸ್ ಕೊಡುವು ದಂತು ಸತ್ಯ. ವಂದೇ ಭಾರತ್ ರೈಲು ಉದ್ಘಾಟನಾ ಸಂದರ್ಭದಲ್ಲಿ ರೈಲ್ವೇ ಸ್ಟೇಷನ್ ಮಾಸ್ಟರ್ ಕೂಡಾ ಬಾವುಟಗಳನ್ನು ತೋರಿಸದಷ್ಟು ಈ ವ್ಯಕ್ತಿತೋರಿಸಿದ್ದಾರೆ.ಅಲಹಾಬಾದ್ ಸೇರಿ ಇತರ ಕಡೆಗಳಿಗೆ ರೈಲ್ವೇ ಸಂಚಾರ ಆರಂಭಿಸಿದರೂ ಒಂದು ರೈಲು ಕೂಡಾ ಮಣಿಪುರಕ್ಕೆ ತೆರಳದೇ ಇರುವುನ್ನು ಟ್ವಿಟ್‌ನಲ್ಲಿ ಪ್ರಶ್ನಿಸಿದರೆ, ಅದನ್ನೇ ಡಿಲೀಟ್ ಮಾಡುತ್ತಾರೆ. ಬಿಜೆಪಿ, ಆರ್‌ಎಸ್ ಎಸ್‌ನಂತಹ ಕಿಡ್‌ನ್ಯಾಪಿಂಗ್ ಟೀಂ ಬೇರೊಂ ದಿಲ್ಲ. ಭಗತ್‌ ಸಿಂಗ್‌ನನ್ನು ಕಿಡ್‌ನ್ಯಾಪ್ ಮಾಡಿ ದರು. ಪಟೇಲ್‌ರನ್ನು ಕಿಡ್‌ನ್ಯಾಪ್ ಮಾಡಿ ಮೂರ್ತಿ ಮಾಡಿ ನಿಲ್ಲಿಸಿದ್ದಾರೆ. ಈಗ ಕೋಟಿ ಚೆನ್ನಯರನ್ನು ಕಿಡ್ನಾಪ್ ಮಾಡಲು ಟ್ರೈ ಮಾಡಿದ್ದಾರೆ. ಆದರೆ ಅದಕ್ಕೆ ಸರಿಯಾದ ಉತ್ತರವನ್ನು ಸಮಾವೇಶದ ಸಂದರ್ಭ ನೀಡ ಲಾಗಿದೆ ಎಂದು ಪ್ರಕಾಶ್ ರಾಜ್ ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *