LATEST NEWS
ಲಾಟ್ರಿ ಮಾರೋ ಮಾರ್ಟಿನ್ ಇವರ ಪರಿವಾರ – ಪ್ರಧಾನಿ ಮೋದಿ ವಿರುದ್ದ ಪ್ರಕಾಶ್ ರಾಜ್ ವಾಗ್ದಾಳಿ

ಮಂಗಳೂರು ಮಾರ್ಚ್ 18: ಲಾಟ್ರಿ ಮಾರೋ ಮಾರ್ಟಿನ್ ಇವರ ಪರಿವಾರ, ನಿಮ್ಮದು ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ಪರಿವಾರ ಎಂದು ಮೋದಿ ಪರಿವಾರದ ವಿರುದ್ದ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ,
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 420 ಗಳೇ ಯಾವಾಗಲೂ ಈ ಬಾರಿ ನಾವು 400 ತಾಟುತ್ತೇವೆ ಹೇಳ್ತಾರೆ, ಏನು ಇದು ಅಹಂಕಾರ ಅಲ್ವಾ ? ನೀವ್ಯಾರ್ರೀ ಅದನ್ನು ಹೇಳೋಕೆ, ಯಾಕೆ ಪ್ರಜಾಪ್ರಭುತ್ವ ಇರೋದು, ಹೀಗೆ ಬಂಗಾಳ, ಕರ್ನಾಟಕದಲ್ಲಿ ಹೇಳಿದ್ರಿ ಆಯ್ತಾ ? ಈಗ ತಮಿಳುನಾಡಿನಲ್ಲಿ ಹೇಳಿದ್ರಿ, ಅಲ್ಲಿ ಆಯ್ತಾ ಆಗಿಲ್ಲ ,ಸುಮ್ಮೆ ಬಾಯಿಗೆ ಬಂದಂಗೆ ಹೇಳ್ಕಂಡು ಬರ್ತೀರಿ ಎಂದರು.

ಚುನಾವಾಣಾ ಬಾಂಡ್ ಮೂಲಕ ಸಾವಿರಾರು ಕೋಟಿ ಹಣ ಇದೆಯಂತ ಧೈರ್ಯಾನಾ ?ಹಣ ಬಲದಿಂದ ಗೆದ್ದೇ ಗೆಲ್ಲುತ್ತೇವೆ ಅಂತ ದೈರ್ಯನಾ?ಧರ್ಮವನ್ನು ದುರುಪಯೋಗ ಪಡಿಸಿ , ಮತಗಳನ್ನು ದುಡ್ಡು ಕೊಟ್ಟು ಖರೀದಿಸ್ತೀವಿ ಅಂತ ಧೈರ್ಯಾನಾ ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿಯವರನ್ನು ಮಹಾಪ್ರಭುಗಳು ಎಂದು ಕರೆ ಪ್ರಕಾಶ್ ರಾಜ್ ಮಣಿಪುರದ ಹೆಣ್ಮಕ್ಕಳ ಬಗ್ಗೆ ಮಾತಾಡಲ್ಲ ಆದರೆ ಮಹಿಳಾ ದಿನದಂದು ಗ್ಯಾಸ್ ಗೆ ನೂರು ರೂ. ಕಡಿಮೆ ಮಾಡ್ತಾರೆ. ಎರಡು ರೂ. ಪೆಟ್ರೋಲ್ ಕಡಿಮೆ ಮಾಡಿದ್ರಲ್ಲಿ ಅರ್ಥ ಇದೆಯಾ? ಎಂದರು.
ಇಲೆಕ್ಟೊರಲ್ ಬಾಂಡ್ ಮೂಲಕ 12 ಸಾವಿರ ಕೋಟಿಯಂತೆ, ನಮಗೆ ಸೊನ್ನೆ ಎಷ್ಟು ಅಂತ ಗೊತ್ತಾಗಲ್ಲ, ಚುನಾವಣೆ ಗೆಲ್ಲೋಕೆ ಬಾಂಡ್ ಮಾಡಿದೀರಿ, ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ವೋ ಗೊತ್ತಿಲ್ಲ ಆದರೆ ನಿಮ್ಮ ಮನೆಯ ಟೈಲರಿಗಂತೂ ಕೆಲಸ ಕೊಟ್ಟಿದೀರಿ ಎಂದು ಟೀಕಿಸಿದ ಅವರು
ಇನ್ನು ಚುನಾವಣೋತ್ತರ ಸಮೀಕ್ಷೆ ಎನ್ನುವುದು ವ್ಯಾಪಾರವಾಗಿದೆ. ಹಣ ಕೊಟ್ಟು ಮಾಡಿಸುವಂಥ ಸಮೀಕ್ಷೆಗಳು ಇವು. ಇವತ್ತು ಪತ್ರಿಕೆ ಓಪನ್ ಮಾಡ್ತಾರಂದ್ರೆ ಯಾವ ಪಕ್ಷದ್ದು ಅಂತ ಗೊತ್ತಾಗುತ್ತದೆ. ಒಳ್ಳೆಯ ಅಭ್ಯರ್ಥಿಗಳು ಗೆದ್ರೆ ನೀವು ಗೆದ್ದಂತೆ, ಅದಕ್ಕಾಗಿ ಒಳ್ಳೆಯ ಅಭ್ಯರ್ಥಿ ಗೆಲ್ಲಿಸಿ. ನಾನು ಚುನಾವಣೆ ನಿಲ್ಲಲ್ಲ, ಯಾವ ಪಕ್ಷದ ಪರವು ಪ್ರಚಾರ ಮಾಡಲ್ಲ. ಜನರ ಪಕ್ಷ ನಾವು, ಎಲ್ಲಾ ಪಕ್ಷದವರು ಒಂದೇ, ಅವನ ಬಿಲ್ಡಿಂಗಲ್ಲಿ ಇವನ ಬಾರಿದೆ, ಎಲ್ಲ ಪಕ್ಷದ ನಾಯಕರಲ್ಲು ಹೊಂದಾಣಿಕೆ ಇದೆ. 320 ಎಂಪಿಗಳಿದ್ದಾರೆ, ಅದನ್ನು ಹಂಚಿದ್ರೆ ಕಡಿಮೆ ಬರತ್ತೆ ಅಂತಾರೆ ಎಂದು ವಾಗ್ದಾಳಿ ನಡೆಸಿದರು.