LATEST NEWS
ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿರುದ್ದ ಕಿಡಿಕಾರಿದ ಪ್ರಕಾಶ್ ರೈ
ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿರುದ್ದ ಕಿಡಿಕಾರಿದ ಪ್ರಕಾಶ್ ರೈ
ಪುತ್ತೂರು ಫೆಬ್ರವರಿ 26: ಅಮಿತ್ ಶಾ ವಿರುದ್ದ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕಿದ್ದ ವಿಧ್ಯಾರ್ಥಿ ವಿರುದ್ದ ಕಾಲೇಜು ಆಡಳಿತ ಮಂಡಳಿ ತೆಗೆದುಕೊಂಡ ಕ್ರಮದ ವಿರುದ್ದ ಖ್ಯಾತ ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ.
ಫೆಬ್ರವರಿ 20 ರಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಕಾಲೇಜು ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಟೀಕಿಸಿ ವಿವೇಕಾನಂದ ಕಾನೂನು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಜಸ್ಟಿನ್ ಎನ್ನುವಾತ ತನ್ನ ಇನ್ಸ್ಟ್ರಾಗ್ರಾಮ್ ಪೇಜ್ ನಲ್ಲಿ ಬಂಡಲ್ ಶಾ ಎನ್ನುವ ಸ್ಟೇಟಸ್ ಹಾಕಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಈ ಬಗ್ಗೆ ಮಾಹಿತಿ ಪಡೆದ ಕಾನೂನು ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಒಂದು ವಾರಗಳ ಕಾಲ ಕಾಲೇಜಿಗೆ ಬರದಂತೆ ಸೂಚಿಸಿತ್ತು. ಈ ವಿಚಾರವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧವೂ ಆಕ್ರೋಶಗಳು ಕೇಳಿ ಬಂದಿತ್ತು.
ಈ ನಡುವೆ ಈ ಬಗ್ಗೆ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಖ್ಯಾತ ನಟ ಪ್ರಕಾಶ್ ರೈ
” ನಮ್ಮ ದೇಶದ ಯುವ ಜನತೆ ಮಾತನಾಡಲು ಹೆದರಿಕೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದಾಗಿದೆ. ಸ್ವತಂತ್ರವಾಗಿ ಮಾತನಾಡದಂತೆ ಯುವ ಮನಸ್ಸುಗಳಲ್ಲಿ ಭಯದ ವಾತಾವರಣ ತುಂಬಲಾಗುತ್ತಿದೆ.”
ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಈ ಬಗ್ಗೆ ಕಾಲೇಜಿನ ಪ್ರಾಂಶುಪಾರು ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾರೆ. ವಿದ್ಯಾರ್ಥಿಯು ಕಾಲೇಜಿನ ನಿಯಮಗಳನ್ನು ಮೀರಿದ ಕಾರಣ ಹಾಗೂ ಈ ವಿಚಾರ ಸಂಘರ್ಷಕ್ಕೆ ಕಾರಣವಾಗದಿರಲಿ ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಭವಿಷ್ಯದ ದೃಷ್ಟಿಯಿಂದ ಈ ನಡೆ ಕೈಗೊಳ್ಳಲಾಗಿದೆ ಎಂದಿದ್ದಾರೆ.