DAKSHINA KANNADA
ಕುಕ್ಕೆಯ ಸನ್ನಿಧಿಗೆ ಪವರ್ ಮಿನಿಸ್ಟರ್ ಡಿಕೆಶಿ

ಕುಕ್ಕೆಯ ಸನ್ನಿಧಿಗೆ ಪವರ್ ಮಿನಿಸ್ಟರ್ ಡಿಕೆಶಿ
ಸುಳ್ಯ, ಸೆಪ್ಟೆಂಬರ್ 24 : ರಾಜ್ಯ ಇಂಧನ ಸಚಿವ ಡಿ ಕೆ. ಶಿವಕುಮಾರ್ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಡಿ ಕೆ ಶಿವಕುಮಾರ್ ಅವರು ದೇವಸ್ಥಾನದಲ್ಲಿ ತುಲಾಭಾರ ಸೇವೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯವರು ಸಚಿವರನ್ನು ಬರಮಾಡಿಕೊಂಡು, ಪೂಜೆ , ತುಲಾಭಾರ ಸೇವೆಗಳಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿದರು.
ತನ್ನ ಮನೆಯ ಮೇಲೆ ಇತ್ತೀಚೆಗೆ ಐಟಿ ದಾಳಿ ನಡೆದ ಬಳಿಕ ಸ್ವಲ್ಪಮಟ್ಟಿಗೆ ಕುಗ್ಗಿ ಹೋಗಿದ್ದ ಡಿಕೆಶಿ ಅವರು ಇದೀಗ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಮನ ಶಾಂತಿಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.

ವಿಡಿಯೋಗಾಗಿ…